ಲಿಂಗಸುಗೂರು: ಬಿಜೆಪಿ ಯುವ ಮೋರ್ಚಾದ ವತಿಯಿಂದ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು.
79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲ್ಲೂಕು ಬಿಜೆಪಿ ಯುವ ಮೋರ್ಚಾದಿಂದ ತಿರಂಗಾ ಯಾತ್ರೆ ಪಟ್ಟಣ ಹೊರವಲಯದ ಮಾತೆ ಮಾಣಿಕೇಶ್ವರಿ ಆಶ್ರಮದಿಂದ ಪ್ರಾರಂಭವಾಗಿ ಗಡಿಯಾರ ವೃತ್ತ, ಸರ್ಕಾರಿ ಪಿಯು ಕಾಲೇಜು ಮುಂಭಾಗದಿಂದ ಬಸ್ ನಿಲ್ದಾಣ ವೃತ್ತದ ಮಾರ್ಗವಾಗಿ ಬಿಜೆಪಿ ಕಚೇರಿಯಲ್ಲಿ ಅಂತ್ಯಗೊಂಡಿತು.
ಬಿಜೆಪಿ ಮಂಡಲ ಅಧ್ಯಕ್ಷರಾದ ನಾಗಭೂಷಣ, ಹುಲ್ಲೇಶ ಸಾಹುಕಾರ, ಯುವ ಮೋರ್ಚಾದ ಅಧ್ಯಕ್ಷರಾದ ಅಜಯಕುಮಾರ ಶಿವಂಗಿ, ಚಂದ್ರುಗೌಡ ಬಯ್ಯಾಪುರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಪರಮೇಶ ಯಾದವ, ಈಶ್ವರ ವಜ್ಜಲ್, ಜಗನ್ನಾಥ ಕುಲಕರ್ಣಿ, ರಾಜು ತಂಬಾಕೆ, ಮಂಜುನಾಥ ಐದನಾಳ, ಪರಶುರಾಮ ಕೆಂಭಾವಿ, ಎಚ್.ವಿ.ಪವಾರ್, ಕೃಷ್ಣಾ ಯಲಗಲದಿನ್ನಿ, ಬಸರೆಡ್ಡಿ ಕರಡಕಲ್ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.