ADVERTISEMENT

ಸಂಚಾರ ಪೊಲೀಸ್‌ ಠಾಣೆ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:16 IST
Last Updated 27 ಜೂನ್ 2020, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು:ನಗರದ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ವೊಬ್ಬರಿಗೆ ಕೋವಿಡ್‌ ದೃಡವಾಗಿದ್ದು, ಠಾಣೆಯನ್ನು ಶನಿವಾರ ಸೀಲ್‌ಡೌನ್‌ ಮಾಡಿ ಸ್ಯಾನಿಟೈಜ್‌ ಮಾಡಲಾಗಿದೆ.

ಠಾಣೆಯಲ್ಲಿ ಕಾರ್ಯನಿರ್ವಹಿಸುವ ಕಾನ್‌ಸ್ಟೇಬಲ್‌ಗಳ ಗಂಟಲು ಮಾದರಿಗಳನ್ನು ಕೋವಿಡ್‌ ತಪಾಸಣೆಗಾಗಿ ಕಳುಹಿಸಲಾಗುತ್ತಿದೆ. ಕೋವಿಡ್‌ ದೃಢವಾಗಿರುವ ಕಾನ್‌ಸ್ಟೇಬಲ್‌, ಅನಾರೋಗ್ಯದಿಂದ ಮೂರು ದಿನಗಳಿಂದರಜೆ ಹಾಕಿದ್ದರು. ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿರುವ ಕ್ವಾರಂಟೈನ್‌ ಕೇಂದ್ರಕ್ಕೆ ಕರ್ತವ್ಯಕ್ಕಾಗಿ ಹೋಗಿದ್ದಾಗ ಸೋಂಕು ತಗುಲಿರಬಹುದು ಎಂದು ತಿಳಿಸಲಾಗಿದೆ.

ಸಂಚಾರ ಠಾಣೆಯನ್ನು 48 ಗಂಟೆಗಳ ನಂತರ ಬಳಕೆ ಮಾಡಲಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.