ತುರ್ವಿಹಾಳ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗುಂಜಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹೊಸಳ್ಳಿಯಲ್ಲಿ ಬುಧವಾರದಿಂದಲೇ ನೀರನ್ನು ಪೂರೈಸಲಾಗುತ್ತಿದೆ.
ಈ ಗ್ರಾಮ ನೀರಿನ ಸಮಸ್ಯೆ ಕುರಿತು ‘ಕೆರೆಗಳ ಒಡಲು ಖಾಲಿ: ನೀರಿನ ಸಮಸ್ಯೆ’ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತು.
ಬೆಳಿಗ್ಗೆ ವರದಿ ಗಮನಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬುಧವಾರದಿಂದಲೇ ಪ್ರತಿ ಮನೆಗೆ ಹತ್ತು ಕೊಡಗಳಂತೆ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿದ್ದಾರೆ.
‘ಕಾಲುವೆಗೆ ನೀರು ಬಂದು ಕೆರೆ ತುಂಬಿಸುವವರೆಗೆ ಗ್ರಾಮದಲ್ಲಿ ಪ್ರತಿ ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಮರೇಶ ಕಲಮಂಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.