ADVERTISEMENT

‘ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದರೆ ಹೋರಾಟ'

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 15:11 IST
Last Updated 5 ನವೆಂಬರ್ 2019, 15:11 IST

ರಾಯಚೂರು: ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ರದ್ದು ಮಾಡಬಾರದು. ಪಠ್ಯಪುಸ್ತಕಗಳಲ್ಲಿ ಟಿಪ್ಪು ಇತಿಹಾಸ ತೆಗೆಯಬಾರದು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಎಂ.ಬಸವರಾಜ ಭಂಡಾರಿ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಮತಗಳನ್ನು ಸೆಳೆಯಲು ಟಿಪ್ಪು ಸುಲ್ತಾನ ಪರ ಮತ್ತು ವಿರೋಧ ವ್ಯಕ್ತಪಡಿಸುತ್ತಿವೆ. ಹಿಂದೂ–ಮುಸ್ಲಿಂ ಮಧ್ಯೆ ಜಗಳ ಹಚ್ಚುತ್ತಿವೆ. ಟಿಪ್ಪುಸುಲ್ತಾನ ಒಬ್ಬ ಪ್ರಸಿದ್ಧ ಅರಸ; ಮೈಸೂರಿನ ಹುಲಿ ಎಂದು ಬಿರುದು ಪಡೆದಿದ್ದಾರೆ. ಯುದ್ಧದಲ್ಲಿ ಕ್ಷಿಪಣಿ ಬಳಸಿದ ಮೊಟ್ಟ ಮೊದಲ ರಾಜನಾಗಿದ್ದಾನೆ. ಇಂಥವರ ಇತಿಹಾಸ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.

ಒಂದು ವೇಳೆ ಬಿಜೆಪಿ ಸರ್ಕಾರವು ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಟ್ಟರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ADVERTISEMENT

ವಕೀಲ ಹನುಮಂತಪ್ಪ, ವೆಂಕನಗೌಡ ನಾಯಕ, ಎಂ.ಆರ್.ಭೇರಿ, ವೀರೇಶ ಮಡಿವಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.