ADVERTISEMENT

ರಾಯಚೂರು: ಮಾಸ್ಕ್‌ ಧರಿಸದ ಬೈಕ್‌ ಸವಾರರಿಗೆ ದಂಡ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 12:58 IST
Last Updated 26 ಜೂನ್ 2020, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯಚೂರು: ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕೋವಿಡ್‌ ಜಾಗೃತಿ ಆರಂಭಿಸಿದ್ದು, ಮಾಸ್ಕ್‌ ಧರಿಸದೆ ಬೈಕ್‌ನಲ್ಲಿ ಸಂಚರಿಸುವವರಿಗೆ ದಂಡ ವಿಧಿಸುತ್ತಿದ್ದಾರೆ.

ಪಿಎಸ್‌ಐ, ಸಿಪಿಐ ಹಾಗೂ ಡಿವೈಎಸ್‌ಪಿ ಕೂಡಾ ಜಾಗೃತಿ ಕಾರ್ಯದಲ್ಲಿ ತೊಡಗಿದ್ದು, ಜನರಿಗೆ ತಿಳಿವಳಿಕೆ ನೀಡುವ ಮೂಲಕ ದಂಡ ವಸೂಲಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಬೈಕ್‌ ಸವಾರರಿಗೆ ತಲಾ ₹100 ಹಾಗೂ ನಗರದ ಬೈಕ್‌ ಸವಾರರಿಗೆ ₹200 ದಂಡ ವಿಧಿಸಲಾಗುತ್ತಿದೆ.

ಕಳೆದ ಮೂರು ದಿನಗಳಲ್ಲಿ 952 ಬೈಕ್‌ ಸವಾರರಿಗೆ ದಂಡ ವಿಧಿಸಲಾಗಿದೆ. ಜೂನ್‌ 24 ರಂದು 427 ಬೈಕ್‌ ಸವಾರರಿಗೆ ₹70,100 ದಂಡ ವಿಧಿಸಿದ್ದರೆ, ಜೂನ್‌ 25 ರಂದು 527 ಬೈಕ್‌ ಸವಾರರಿಂದ ಒಟ್ಟು ₹74,400 ದಂಡ ವಸೂಲಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.