ADVERTISEMENT

ದೇವದುರ್ಗ: ಯೋಗ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 5:18 IST
Last Updated 2 ಡಿಸೆಂಬರ್ 2021, 5:18 IST
ದೇವದುರ್ಗ ಪಟ್ಟಣದ ಉಪ-ಕಾರಾಗೃಹದಲ್ಲಿ ನಡೆದ ಯೋಗ ಶಿಬಿರವನ್ನು ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಉದ್ಘಾಟಿಸಿದರು
ದೇವದುರ್ಗ ಪಟ್ಟಣದ ಉಪ-ಕಾರಾಗೃಹದಲ್ಲಿ ನಡೆದ ಯೋಗ ಶಿಬಿರವನ್ನು ಕಸಾಪ ಜಿಲ್ಲಾ ಸಮಿತಿ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಉದ್ಘಾಟಿಸಿದರು   

ದೇವದುರ್ಗ: ‘ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಸಹಕಾರಿ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಹೇಳಿದರು.

ಪಟ್ಟಣದ ಕಾರಾಗೃಹದಲ್ಲಿ ಬುಧವಾರ ಕಾರಾಗೃಹ ಹಾಗೂ ಸುಧಾರಣೆ ಇಲಾಖೆ, ರಾಯಚೂರಿನ ಆರ್ಟ್ ಆಫ್ ಲಿವೀಂಗ್ ಸಹಯೋಗದಲ್ಲಿ ನಡೆದ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ,‘ಮನುಷ್ಯನ ಮನಸ್ಸು ಸದಾ ಚಂಚಲವಾಗಿರುತ್ತದೆ. ಸ್ಥಿರವಾದ ಮನಸ್ಸಿಗೆ ಯೋಗ, ಧ್ಯಾನ ಅಗತ್ಯ’ ಎಂದರು.

ಯೋಗ, ಧ್ಯಾನ ಆಧುನಿಕ ಜಗತ್ತಿನ ಒತ್ತಡಗಳನ್ನು ಸಹ ನಿಯಂತ್ರಿಸಲಿದೆ. ಯೋಗವನ್ನು ಇಂದಿನ ಎಲ್ಲ ವಯೋಮಾನದವರು ಅನುಸರಿಸಬೇಕಾದ ಅವಶ್ಯಕತೆ ಇದೆ ಎಂದರು.

ADVERTISEMENT

ತಹಶೀಲ್ದಾರ್ ಶ್ರೀನಿವಾಸ ಚಾಪೆಲ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.