ರಾಯಚೂರು: ಇಲ್ಲಿಯ ಎಚ್‌ಆರ್‌ಬಿ ಲೇಔಟ್‌ನ ಮಹಿಳಾ ಸಮಾಜದ ಸಮೀಪ ಮನೆಯೊಂದರಲ್ಲಿ ಪಿಸ್ತೂಲ್‌ನಿಂದ ಆಕಸ್ಮಿಕವಾಗಿ ಗುಂಡುಹಾರಿ ಯುವಕನೊಬ್ಬ ಗಾಯಗೊಂಡಿದ್ದಾನೆ.
ಮೇ 3ರಂದು ಮಹ್ಮದ್ ಸೋಹಲ್‌ನ ಎಡಗಾಲಿಗೆ ಗುಂಡು ತಗುಲಿ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ನೇಹಿತ ಜಿಯಾಸೌದಾಗರ ತನ್ನ ಮನೆಗೆ ಮಹ್ಮದ್ ಸೋಹಲ್ ಕರೆದುಕೊಂಡು ಬಂದು ಪಿಸ್ತೂಲ್ ತೋರಿಸುತ್ತಿದ್ದ. ನಾಲ್ಕು ಗುಂಡುಗಳನ್ನು ಲೋಡ್ ಮಾಡಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ ಎನ್ನಲಾಗಿದೆ.
ಸದರ ಬಜಾರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.