ADVERTISEMENT

ಅಂಗವಿಕಲರ ದಿನಾಚರಣೆ ಮರೆತ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 9:25 IST
Last Updated 4 ಡಿಸೆಂಬರ್ 2013, 9:25 IST

ರಾಮನಗರ: ಮಕ್ಕಳ ದಿನ ಆಚರಿ ಸುವುದನ್ನು ಮರೆತಿದ್ದ ಜಿಲ್ಲಾಡಳಿತ ಇದೀಗ ವಿಶ್ವ ಅಂಗವಿಕಲರ ದಿನಾಚರಣೆ ಆಚರಿಸುವುದನ್ನೂ ಮರೆತಿದೆ !

ಮೊದಲೇ ಸರ್ಕಾರ ಮತ್ತು ಅಧಿಕಾರಿಗಳು ತಮ್ಮನ್ನು ತಾತ್ಸಾರ ದಿಂದ ನೋಡುತ್ತಾರೆ ಎಂದು ಬೇಸರ ಹೊಂದಿದ್ದ ಅಂಗವಿಕಲ ಸಮು ದಾಯಕ್ಕೆ ಜಿಲ್ಲಾಡಳಿತ ಈ ಬಾರಿಯೂ ಅಂಗವಿಕಲ ದಿನ ಆಚ ರಿಸಲಿಲ್ಲ ಎಂಬುದು ಮತ್ತಷ್ಟು ಬೇಸರ ಹೊಂದುವಂತೆ ಮಾಡಿದೆ

‘ಅಂಗವಿಕಲರಿಗೆ ಸೂಕ್ತ ಸೌಲಭ್ಯ ಮತ್ತು ಅಗತ್ಯ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತದಿಂದ ನಾವು ಅಂಗ ವಿಕಲರ ದಿನಾಚರಣೆ ನಿರೀಕ್ಷಿಸು ವುದೂ ತಪ್ಪು’ ಎಂದು ಅಂಗವಿಕಲ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಅಂಗವಿಕಲರ ಕಲ್ಯಾಣಕ್ಕೆಂದೇ ಜಿಲ್ಲೆಗಳಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಇದೆ. ಇಲ್ಲಿ ಅಂಗವಿಕಲ ಕಲ್ಯಾಣಾಧಿಕಾರಿ ಮತ್ತು ಸಿಬ್ಬಂದಿ ಇದ್ದಾರೆ. ಅಂಗವಿಕಲರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸುವುದೇ ಇವರ ಮುಖ್ಯ ಕರ್ತವ್ಯ. ನಮ್ಮಿಂದಾಗಿ ಇರುವ ಇಲಾಖೆಯ ಸಿಬ್ಬಂದಿಗೆ ಅಂಗವಿಕಲರ ದಿನ ನೆನಪಿಲ್ಲ ದಿರುವುದು ಸೋಜಿಗವೇ ಸರಿ’ ಎಂದು ಅವರು ಬೇಸರದಿಂದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.