ADVERTISEMENT

ಅಂತಿಮ ಕಣ: ಉಳಿದವರು 49 ಅಭ್ಯರ್ಥಿಗಳು

ರಾಮನಗರ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 6 ಮಹಿಳೆಯರು ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 13:20 IST
Last Updated 28 ಏಪ್ರಿಲ್ 2018, 13:20 IST
ಕ್ಷೇತ್ರವಾರು ಅಭ್ಯರ್ಥಿಗಳ ವಿವರ
ಕ್ಷೇತ್ರವಾರು ಅಭ್ಯರ್ಥಿಗಳ ವಿವರ   

ರಾಮನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 49 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶುಕ್ರವಾರ ಮಾಗಡಿಯಿಂದ 1, ಕನಕಪುರದಿಂದ 3 ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ 4 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು.

ಕಣದಲ್ಲಿ ಉಳಿದವರ ಪೈಕಿ 43 ಮಂದಿ ಪುರುಷರಾಗಿದ್ದರೆ, 6 ಮಹಿಳೆಯರಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ತಲಾ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲದೆ ಇತರೆ ಪಕ್ಷಗಳಿಂದ 11 ಅಭ್ಯರ್ಥಿಗಳು ಉಳಿದಿದ್ದಾರೆ. 26 ಮಂದಿ ಪಕ್ಷೇತರರಾಗಿ ಸ್ಪರ್ಧೆ ಎದುರಿಸಲಿದ್ದಾರೆ.

ನಾಮಪತ್ರಗಳನ್ನು ಹಿಂದಕ್ಕೆ ಪಡೆದವರು: ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿಯ ಅಭ್ಯರ್ಥಿ ಕೆ.ವಿ. ನಾಗಾನಂದ ನಾಮಪತ್ರ ಹಿಂಪಡೆದಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ
ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಜಿ.ಎಸ್. ಅಭಿಷೇಕ್ ಗೌಡ, ಪಕ್ಷೇತರ ಅಭ್ಯರ್ಥಿಗಳಾದ ಜೆ. ಮಹದೇವಯ್ಯ ಹಾಗೂ ರಾಜ್ ಗೋಪಾಲ್ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ADVERTISEMENT

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಲ್ ಇಂಡಿಯಾ ಹಿಂದುಸ್ತಾನ್ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಎಂ.ಸಿ.ವಿ ಮೂರ್ತಿ, ಪಕ್ಷೇತರ ಅಭ್ಯರ್ಥಿಗಳಾದ ಈಶ್ವರ್, ಅಂದಾನಯ್ಯ, ಎ.ಸಿ. ಕುಮಾರಸ್ವಾಮಿ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿದ್ದಾರೆ.

ಕಣದಲ್ಲಿ ಉಳಿದವರು: 

ಮಾಗಡಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ, ಜೆಡಿಎಸ್ ಅಭ್ಯರ್ಥಿ ಎ. ಮಂಜುನಾಥ್, ಬಿಜೆಪಿ ಅಭ್ಯರ್ಥಿ ಎಂ.ಸಿ. ಹನುಮಂತರಾಜು, ಎಎಂಇಪಿ ಅಭ್ಯರ್ಥಿ ಡಿ.ಎಂ. ಮಾದೇಗೌಡ, ಸಮಾಜವಾದಿ ಪಾರ್ಟಿ ಅಭ್ಯರ್ಥಿ ಡಿ. ಶಿವಕುಮಾರ್, ಪಕ್ಷೇತರ ಅಭ್ಯರ್ಥಿಗಳಾದ ಎಂ.ಜಿ ಜಯಾನಂದ ಸ್ವಾಮಿ, ಎಚ್. ನರಸಿಂಹಮೂರ್ತಿ, ನವೀನ್ ಕುಮಾರ್, ಎಂ.ಪ್ರಶಾಂತ್ ಹಾಗೂ ಬಿ.ಮುರಳಿ.

ಕನಕಪುರ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ ಕೆ.ಎಸ್.ನಂದಿನಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಶಿವಕುಮಾರ್, ರಾಷ್ಟ್ರೀಯ ಮಾನವ ವಿಕಾಸ ಪಕ್ಷದ ಅಭ್ಯರ್ಥಿ ಎಸ್.ಅರುಣ್ ಕುಮಾರ್, ಪ್ರಜಾ ಪರಿವರ್ತನಾ ಪಕ್ಷದ ಅಭ್ಯರ್ಥಿ ಬಿ.ಆರ್ ಪ್ರಕಾಶ್, ಪಕ್ಷೇತರ ಅಭ್ಯರ್ಥಿಗಳಾದ ಪಿ. ನಾರಾಯಣ, ಎಚ್.ಎಸ್.ಪ್ರದೀಪ್ ಕುಮಾರ್, ಕೆ.ವೈ.ಮಾದಯ್ಯ, ಕೆ.ವಿ.ವಿಶ್ವನಾಥ್, ಎಂ.ಡಿ. ಶಿವಕುಮಾರ್ ಹಾಗೂ ಶಿವರೇಣುಕ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ರೇವಣ್ಣ, ಅಂಬೇಡ್ಕರ್ ಸಮಾಜಪಾರ್ಟಿ ಅಭ್ಯರ್ಥಿ ಪಿ. ಅಶ್ವಥ್, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ ಅಭ್ಯರ್ಥಿ ಜೆ.ಟಿ ಪ್ರಕಾಶ್, ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿ ಅಭ್ಯರ್ಥಿ ಕೆ.ವಿ. ಮನು, ಎಎಂಇಪಿ ಅಭ್ಯರ್ಥಿ ಬಿ.ಎಂ. ಲೋಕೇಶ್, ಸಾಮಾನ್ಯ ಜನತಾ ಪಾರ್ಟಿ (ಲೋಕ ತಾಂತ್ರಿಕ) ಅಭ್ಯರ್ಥಿ ಕೆ.ಪಿ.ಶಿಲ್ಪ, ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಕೆ.ಎನ್. ಸಿದ್ದರಾಜು, ಸ್ವತಂತ್ರ ಅಭ್ಯರ್ಥಿಗಳಾದ ಎ. ಕೃಷ್ಣ, ಎಸ್.ಆರ್. ಜೈ ಕಿಸಾನ್,
ಎಸ್.ಆರ್. ನವ್ಯಶ್ರೀ, ಟಿ.ಎಂ ಮಂಚೇಗೌಡ, ಎನ್.ಯೋಗೇಶ, ರತ್ನಮ್ಮ.

ರಾಮನಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಎಚ್.ಎ.ಇಕ್ಬಾಲ್ ಹುಸೇನ್, ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಲೀಲಾ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿ ಜೆ.ಟಿ. ಪ್ರಕಾಶ್, ಪಕ್ಷೇತರರಾದ ಎಸ್. ಕಾಂತರಾಜು, ಬಿ.ಎಸ್. ಕುಮಾರ್, ಗುಲಾಬ್ ಜಾನ್, ಎನ್. ಭರತ್, ಜೆ. ಮಂಜುನಾಥ, ಜಿ.ಪಿ ಶಂಕರೇಗೌಡ, ಎಸ್. ಶಿವಕುಮಾರ್, ಎಸ್. ಸಿದ್ದಮಾರಯ್ಯ ಹಾಗೂ ಬಿ.ಪಿ. ಸುರೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.