ಕನಕಪುರ: ಲಯನ್ಸ್ ಮತ್ತು ಲಿಯೋಕ್ಲಬ್, ಬೆಂಗಳೂರು ವೆಸ್ಟ್ ಶ್ರೇಯಾ ಫೌಂಡೇಶನ್ ಮತ್ತು ಹುಣಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಪಶು ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ತಪಾಸಣಾ ಶಿಬಿರದಲ್ಲಿ ಕಾಂಗ್ರೆಸ್ ಯುವ ಮುಖಂಡ ಡಿ.ಕೆ.ಸುರೇಶ್, ಬಿಜ್ಜಳ್ಳಿ ಸಾಹುಕಾರ್ ಸಿದ್ದಲಿಂಗಯ್ಯ, ಶ್ರೇಯಾ ಫೌಂಡೇಶನ್ ಅಧ್ಯಕ್ಷ ಕೆ.ವಿ.ವಿಶ್ವನಾಥ್, ಲಿಯೋ ಅಧ್ಯಕ್ಷ ಎಚ್.ಆರ್.ಮಂಜುನಾಥ್, ಲಯನ್ಸ್ ಅಧ್ಯಕ್ಷ ರವಿಶಂಕರ್, ರಮೇಶ್‌ಗೌಡ, ವಕೀಲ ಎಚ್.ಆರ್.ಸಂಪತ್, ಡಾ. ಕೆ.ಎಸ್.ಸುಬ್ಬಯ್ಯ, ಕೆ.ಜಿ.ಸತೀಶ್, ಎಚ್.ಸಿ.ಸಂತೋಷ ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 150 ಮಂದಿಗೆ ಕಣ್ಣು ತಪಾಸಣೆ ಮಾಡಲಾಯಿತು. ಅವರುಗಳಲ್ಲಿ 14 ಮಂದಿಗೆ ಶಸ್ತ್ರಚಿಕಿತ್ಸೆ ಅವಶ್ಯಕವಿದ್ದುದರಿಂದ ಅವರನ್ನು ಬೆಂಗಳೂರಿನ ಲಯನ್ಸ್ ವೆಸ್ಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಕೆ.ಎಸ್.ಸುಬ್ಬಯ್ಯ, ಜಗದೀಶ್‌ರೆಡ್ಡಿ ಹಾಗೂ ದೇಗುಲಮಠದ ನರ್ಸಿಂಗ್ ವಿದ್ಯಾರ್ಥಿಗಳು ಸುಮಾರು 500ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡಿ ಆರೋಗ್ಯದ ಬಗ್ಗೆ ತಿಳಿವಳಿಕೆ ನೀಡಿದರು.
ಪಶು ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ಲಿಂಗರಾಜಯ್ಯ, ಡಾ.ಯು.ಸಿ.ಕುಮಾರ್ ಮತ್ತು ಸಿಬ್ಬಂದಿವರ್ಗದವರು ಸುಮಾರು 120 ರಾಸುಗಳಿಗೆ ಚಿಕಿತ್ಸೆ ನೀಡಿದರು.
ಗೋಪಾಲರಾಜು, ವೆಂಕಟೇಶ್, ಪ್ರಶಾಂತ್, ಸತೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾರಂಭ
ಕನಕಪುರ: ಕನ್ನಡ ಸಾಹಿತ್ಯ ಪರಿಷತ್ತು ಕೋಡಿಹಳ್ಳಿ ಹೋಬಳಿ ಘಟಕದ ಉದ್ಘಾಟನಾ ಸಮಾರಂಭವು ಇದೇ 26ರಂದು ತಿಪ್ಪೂರು ಗ್ರಾಮದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೂ.ಗಿ.ಗಿರಿಯಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.