ADVERTISEMENT

ಕಾಡಾನೆ ದಾಳಿ ನಿಯಂತ್ರಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 9:58 IST
Last Updated 16 ಸೆಪ್ಟೆಂಬರ್ 2013, 9:58 IST
ಮಾಗಡಿ ತಾಲ್ಲೂಕಿನ ಪೋಲೋಹಳ್ಳಿ ಬಳಿ ಕಾಡಾನೆಗಳು ದಾಳಿ ಮಾಡಿ ತೆಂಗಿನ ಮರಗಳನ್ನು ನಾಶ ಮಾಡಿವೆ
ಮಾಗಡಿ ತಾಲ್ಲೂಕಿನ ಪೋಲೋಹಳ್ಳಿ ಬಳಿ ಕಾಡಾನೆಗಳು ದಾಳಿ ಮಾಡಿ ತೆಂಗಿನ ಮರಗಳನ್ನು ನಾಶ ಮಾಡಿವೆ   

ಮಾಗಡಿ: ತಾಲ್ಲೂಕಿನ ಸಾವನ ದುರ್ಗದ ಅರಣ್ಯದಂಚಿನ ಪೋಲೋಹಳ್ಳಿ ಗ್ರಾಮದಲ್ಲಿ ಆನೆಗಳ ಹಿಂಡು ದಾಳಿ ನಡೆಸಿ ತೆಂಗು, ಮಾವು, ರಾಗಿ ಜೋಳ ಫಸಲನ್ನು ನಾಶ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ರೈತ ದೊಳ್ಳಯ್ಯ ಅವರ ರಾಗಿಹೊಲ, ಕೆಂಗಣ್ಣ ಅವರ ಆರು ತೆಂಗಿನ ಮರ, ಪೂಜಾರಿ ಚಿಕ್ಕಣ್ಣ ಅವರ ಮಾವಿನ ಮರ, ಸ್ವಾಮಿ ಅವರ ಆರು ತೆಂಗಿನ ಮರ ಸೇರಿದಂತೆ ಒಂದು ಎಕರೆ ಜೋಳ, ಲಿಂಗೇಶ್ ಅವರ ಎಂಟು ಮಾವಿನ ಮರಗಳು, ಒಂದು ಎಕರೆ ಜೋಳ, ಗುಡ್ಡಹಳ್ಳಿಯ ಗಂಗಣ್ಣ ಅವರಿಗೆ ಸೇರಿದ ಕುಂಬಳ ಬಳ್ಳಿಯನ್ನು ಕಾಡಾನೆಗಳ ಹಿಂಡು ನಾಶ ಮಾಡಿವೆ. ಅಲ್ಲದೆ ರಾಗಿ ಹೊಲವನ್ನು ತುಳಿದು ಧ್ವಂಸ ಮಾಡಿದೆ.

ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರಿಂದ ರೈತರು ಆರ್ಥಿಕ ಹೊರೆ ಎದು ರಿಸುವಂತಾಗಿದೆ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಕಾಡಾನೆಗಳ ಉಪ ಟಳವನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆನೆ ದಾಳಿಯಿಂದ ಬೆಳೆ ನಾಶ
ಮಾಗಡಿ: ತಾಲ್ಲೂಕಿನ ಸಾವನದುರ್ಗ ಅರಣ್ಯದ ಅಂಚಿನಲ್ಲಿರುವ ಪೋಲೋ ಹಳ್ಳಿಯ ರೈತರ ಹೊಲಗಳಿಗೆ 6 ಕಾಡಾ ನೆಗಳು ದಾಳಿ ಮಾಡಿ ಲಕ್ಷಾಂತರ ರೂ. ಮೌಲ್ಯದ ಬಾಳೆ, ತೆಂಗು ಬೆಳೆ ಗಳನ್ನು  ನಾಶ ಮಾಡಿವೆ. ರೈತರಾದ ಪಾ ಪಣ್ಣ, ಕೆಂಚಪ್ಪ, ಶಿವಣ್ಣ, ದೊಳ್ಳೆಗೌಡ ಅವರ ಬೆಳೆ ದಾಳಿಯಲ್ಲಿ ಹಾನಿಗೊಳಗಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.