ADVERTISEMENT

ಕೂಲಿಕಾರ್ಮಿಕರ ದರ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಮಾಗಡಿ: ರೇಷ್ಮೆ ಹುರಿ ಕಾರ್ಖಾನೆಗಳಿಗೆ ಸರಬರಾಜಾಗುತ್ತಿರುವ ಸಪ್ಪೆ ರೇಷ್ಮೆಗೆ ಕೂಲಿಯ ದರ ಹೆಚ್ಚಿಸುವಂತೆ ಸಂಘದ ಅಧ್ಯಕ್ಷ ಎಂ.ಎಚ್.ರಂಗನಾಥ್ ಹೇಳಿದರು.

ಅವರು ರೇಷ್ಮೆ ಹುರಿ ಕಾರ್ಖಾನೆ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಯಕ್ಕೆ ಸಪ್ಪೆ ರೇಷ್ಮೆ ನೂಲಿಗೆ ರೂ.120 ನೀಡುತ್ತಿದ್ದು ಕೂಲಿ ಕಾರ್ಮಿಕರಿಗೆ ನಾವು ದಿನಗೂಲಿ ಕೊಡದಂತಹ ಸಂಕಷ್ಟದಲ್ಲಿದ್ದೇವೆ.

 ಕನಿಷ್ಠ  200 ರೂ. ಬೆಲೆಯನ್ನಾದರೂ ಹೆಚ್ಚಿಸಬೇಕು. ಜೋಡು ಹುರಿಗೆ ರೂ.300 ಹೆಚ್ಚಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಕರಪತ್ರ ಮುದ್ರಿಸಿ ರೇಷ್ಮೆ ನೂಲು ಸರಬರಾಜು ಮಾಡುತ್ತಿರುವ ಬೆಂಗಳೂರಿನ ಮಾಲೀಕರಿಗೆ ಮನವಿ ಮಾಡುವುದಾಗಿ ಸಂಘದ ಸಂಚಾಲಕ ನಿಜಗುಣ ಶಿವಯೋಗಿ ವಿವರಿಸಿದರು.

ಸಂಚಾಲಕ ಎಂ.ಟಿ.ಶಿವಣ್ಣ, ಆಂಜನೇಯಗುಪ್ತ, ಎಂ.ಡಿ.ನರಸಿಂಹಮೂರ್ತಿ, ತಿರುಮಲೆ ನಾರಾಯಣಸ್ವಾಮಿ, ಎಸ್.ಮಹದೇವ್, ಮುನಾವರ್ ಇತರರು ರೇಷ್ಮೆ ಹುರಿ ಕಾರ್ಖಾನೆ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಮಾತನಾಡಿದರು. ರೇಷ್ಮೆ ಹುರಿ ಕಾರ್ಖಾನೆಯ ನೂರಾರು ಮಾಲೀಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.