ರಾಮನಗರ: ಚನ್ನಪಟ್ಟಣ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 15 ರಂದು ಚನ್ನಪಟ್ಟಣದ ಪುರಭವನದ ಆವರಣದಲ್ಲಿ ಆಯೋಜಿಸಲಾಗಿದೆ.
ಗೋವಿಂದಹಳ್ಳಿ ದೇವೇಗೌಡ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಅಂದು ಬೆಳಿಗ್ಗೆ 8- ಗಂಟೆಗೆ ಜರುಗಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಶೀಲ್ದಾರ್ ಈ. ಶಿವರುದ್ರಪ್ಪ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ನೆರವೇರಿಸುವರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಬೆಳಿಗ್ಗೆ 8,-45 ಕ್ಕೆ ಪಂಚದೀಪ ವೃತ್ತದಿಂದ ಆರಂಭವಾಗಿ ಪುರಭವನದ ವೇದಿಕೆ ತಲುಪಲಿದೆ. ಸಮ್ಮೇಳನದ ಉದ್ಘಾಟನೆಯು ಬೆಳಿಗ್ಗೆ 10.-30 ಗಂಟೆಗೆ ಜರುಗಲಿದ್ದು, ಚನ್ನಪಟ್ಟಣ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಸಿ.ಪಿ.ಯೋಗೇಶ್ವರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಸಾಹಿತಿ ಡಾ. ಸಾ.ಶಿ.ಮರುಳಯ್ಯ ಹಾಗೂ ಡಾ. ಎಲ್.ಹನುಮಂತಯ್ಯ ಭಾಗವಹಿಸುವರು. ಬೆಂ.ಗ್ರಾ.ಜಿಲ್ಲೆ ಕ.ಸಾ,ಪ ಮಾಜಿ ಜಿಲ್ಲಾಧ್ಯಕ್ಷ ಸು.ತ.ರಾಮೇಗೌಡ ಉಪಸ್ಥಿತರಿರುವರು. ಸಮ್ಮೇಳನಾಧ್ಯಕ್ಷ ಗೋವಿಂದಹಳ್ಳಿ ದೇವೇಗೌಡ ಭಾಷಣ ನುಡಿಗಳನ್ನಾಡುವರು.
ಮಧ್ಯಾಹ್ನ 12-.30 ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 2-.15 ಕ್ಕೆ ವಿಚಾರಗೋಷ್ಠಿ, ಸಂಜೆ 4-.15 ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಸಂಜೆ 5.-15 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದ್ದು, ಕನ್ನಡ ಹೋರಾಟಗಾರ ಮಾಜಿ ಶಾಸಕ ವಾಟಾಳ್ ನಾಗರಾಜ್ ಸಮಾರೋಪ ಭಾಷಣ ಮಾಡುವರು. ಸಂಸದ ಡಿ.ಕೆ.ಸುರೇಶ್, ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವರು. ರಾತ್ರಿ 7.-30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ತಾ.ಪಂ.ಸಾಮಾನ್ಯ ಸಭೆ 15ರಂದು
ರಾಮನಗರ: ರಾಮನಗರ ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ಎ. ಮಂಜುನಾಥ್ ಅವರ ನೇತೃತ್ವದಲ್ಲಿ ಇದೇ 15ರಂದು ಬೆಳಿಗ್ಗೆ 11 ಗಂಟೆಗೆ ತಾ,ಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.