ADVERTISEMENT

ಜಾಲಮಂಗಲ ಕೆರೆಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 9:38 IST
Last Updated 13 ಅಕ್ಟೋಬರ್ 2017, 9:38 IST
ಕೂಟಗಲ್‌ ಹೋಬಳಿಯ ಜಾಲಮಂಗಲದ ಕೆರೆಯ ಬಾಗಿನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪಾಲ್ಗೊಂಡರು
ಕೂಟಗಲ್‌ ಹೋಬಳಿಯ ಜಾಲಮಂಗಲದ ಕೆರೆಯ ಬಾಗಿನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಪಾಲ್ಗೊಂಡರು   

ಕೂಟಗಲ್‌ (ರಾಮನಗರ): ಇಲ್ಲಿನ ಜಾಲಮಂಗಲದ ಲಕ್ಷ್ಮಿನಾರಾಯಣ ಬೆಟ್ಟದ ತಟದಲ್ಲಿರುವ ಕೆರೆಗೆ ಸಾಂಪ್ರದಾಯಿಕವಾಗಿ ಗ್ರಾಮಸ್ಥರು ವಿನೂತನವಾಗಿ ಬಾಗಿನ ಅರ್ಪಿಸಿದರು. ಅಕ್ಕೂರು ಗ್ರಾಮದ ರಸ್ತೆಯಲ್ಲಿರುವ ಗ್ರಾಮದ ಪ್ರಮುಖ ಕೆರೆ ತುಂಬಿ ಕೋಡಿ ಬಿದ್ದಿದೆ.

ಈ ಹಿನ್ನಲೆಯಲ್ಲಿ ಗ್ರಾಮದ ಶ್ರೀಲಕ್ಷ್ಮಿನಾರಾಯಣ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಮಹಿಳೆಯರು ಕಳಸ ಹೊತ್ತು ದೇವಾಲಯದಿಂದ ಕಲಾ ತಂಡಗಳೊಂದಿಗೆ ಮೆರವಣಿಗೆಗೆ ಪೂಜೆಗೆ ತೆರಳಿದರು.

‘ವರುಣನ ಕೃಪೆಯಿಂದ ಉತ್ತಮ ಮಳೆಯಾಗಿದ್ದು ಆ ಆತಂಕ ದೂರವಾಗಿದೆ. ಮುಂದಿನ ದಿನಗಳಲ್ಲಿ ಜನರಿಗೆ ಕುಡಿಯುವ ನೀರು ಮತ್ತು ಜನಜಾನುವಾರುಗಳಿಗೆ ಅನುಕೂಲವಾಗಲಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಅಶೋಕ್‌ಕುಮಾರ್ ಹೇಳಿದರು.

ADVERTISEMENT

‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ದಿನಾಂಕ ನಿಗದಿಪಡಿಸಿಕೊಂಡು ಜಾಲ ಮಂಗಲದಲ್ಲಿ ಬೃಹತ್ ಜೆಡಿಎಸ್ ಪಕ್ಷದ ಸಭೆಯನ್ನು ಆಯೋಜಿಸಲಾಗುವುದು’ ಎಂದರು.ಎಪಿಎಂಸಿ ಅಧ್ಯಕ್ಷ ಅಕ್ಕೂರು ಪುಟ್ಟರಾಮಯ್ಯ, ನಿರ್ದೇಶಕರಾದ ವಿ. ವೆಂಕಟರಂಗಯ್ಯ, ಜಾಲಮಂಗಲ ಎನ್.ರಾಜು. ಎಂಪಿಸಿಎಸ್ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಸುಬ್ಬಣ್ಣಶಾಸ್ತ್ರಿ, ಅಶೋಕ್, ಕೆಂಚಪ್ಪ, ಪುಟ್ಟಸ್ವಾಮಯ್ಯ, ರೇವಣಸಿದ್ದಯ್ಯ, ರಾಮಚಂದ್ರು, ರಂಗೇ ಗೌಡ,ನಾರಾಯಣ್,ಶ್ರೀನಿವಾಸ್, ಗ್ರಾಮಸ್ಥರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.