ADVERTISEMENT

ತಾಲ್ಲೂಕು ಕ್ರೀಡಾ ಕೂಟದ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ಮಾಗಡಿ: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ  ಪಟ್ಟಣದ ಗಂಗಾಧರೇಶ್ವರ ಬಾಲಕಿಯರ ಪ್ರೌಢಶಾಲೆಯ ಕಲಾವತಿ ಎಸ್(ಪ್ರಥಮ) ಅವರು ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

100 ಮೀಟರ್ ಓಟ ಸ್ಪರ್ಧೆಯಲ್ಲಿ ಅರಿಶಿನಕುಂಟೆ ಸರ್ಕಾರಿ ಪ್ರೌಢಶಾಲೆ ಪ್ರೇಮ.ಕೆ. ದ್ವಿತೀಯ, ಹುಲೀಕಲ್‌ನ ಎಸ್.ಬಿ.ಎಚ್.ಎಸ್‌ನ ಮಂಜುಳ(ತೃತೀಯ) ಸ್ಥಾನ ಪಡೆದಿದ್ದಾರೆ.200ಮೀ ಓಟ ಸ್ಪರ್ಧೆಯಲ್ಲಿ ಜ್ಯೋತಿ ತಿಪ್ಪಸಂದ್ರ, ರೂಪ ಕುದೂರು, ವಾಸವಿ ಶಾಲೆಯ ಪುಷ್ಪಾ ಅವರ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ. 400 ಮೀ ಹುಲಿಕಟ್ಟೆಯ ವಿಜಯಲಕ್ಷ್ಮಿ ಪ್ರಥಮ, ವಾಸವಿ ಶಾಲೆಯ ನೇಹಾ ಸುಲ್ತಾನ ದ್ವಿತೀಯ ಹಾಗೂ ರಂಗನಾಥಶಾಲೆಯ ನಾಗರತ್ನಮ್ಮ ತೃತೀಯ ಸ್ಥಾನ ಪಡೆದಿದ್ದಾರೆ.

800ಮೀ - ಬಾಚೇನಹಟ್ಟಿ ಭವಾನಿ - ಪ್ರಥಮ, ಹೊಸಪಾಳ್ಯದ ಅನಿತಾಲಕ್ಷ್ಮಿ - ದ್ವಿತೀಯ, ಸರಸ್ವತಿಶಾಲೆಯ ರೂಪಿಣಿ - ತೃತೀಯ ಸ್ಥಾನ ಪಡೆದಿದ್ದಾರೆ. 1500 ಮೀ- ತಿಪ್ಪಸಂದ್ರದ ಆಶಾ.ಟಿ.ಎಸ್- ಪ್ರಥಮ, ಬಾಚೇನಹಟ್ಟಿ ಭವಾನಿ - ದ್ವಿತೀಯ, ಹುಲೀಕಟ್ಟೆ ವಿಜಯಲಕ್ಷ್ಮಿ - ತೃತೀಯ ಸ್ಥಾನಗಳಿಸಿದ್ದಾರೆ.

3000 ಮೀ ನಡಿಗೆ ಸ್ಪರ್ಧೆಯಲ್ಲಿ ಬಗಿನಗೆರೆ ಸಂಧ್ಯಾ- ಪ್ರಥಮ, ಬಗಿನಗೆರೆ ಭವ್ಯಾ- ದ್ವಿತೀಯ, ಕಾಗಿಮಡು ತೇಜಾ- ತೃತೀಯ ಸ್ಥಾನ ಪಡೆದಿದ್ದಾರೆ. 3000 ಮೀ ಓಟದ ಸ್ಪರ್ಧೆಯಲ್ಲಿ ತಿಪ್ಪಸಂದ್ರದ ಆಶಾ - ಪ್ರಥಮ, ಹುಲೀಕಟ್ಟೆಯ ವಿಜಯಲಕ್ಷ್ಮಿ- ದ್ವಿತೀಯ, ಬಾಚೇನಹಟ್ಟಿ ಸರಸ್ವತಿ - ತೃತೀಯ ಸ್ಥಾನ ಪಡೆದಿದ್ದಾರೆ. 400 ಮೀ ರಿಲೇ ಸ್ಪರ್ಧೆಯಲ್ಲಿ ತಿಪ್ಪಸಂದ್ರದ ಆಶಾ, ಉಷಾರಾಣಿ, ಜ್ಯೋತಿ, ಭವ್ಯ ಮತ್ತು ಹೊಸಪಾಳ್ಯದ ಕವನ, ಅನಿತಾಲಕ್ಷ್ಮಿ, ಶ್ವೇತಾ ಅವರು ಮೊದಲ ಸ್ಥಾನ ಪಡೆದಿದ್ದಾರೆ.

ಡಿಸ್ಕಸ್ ಥ್ರೋನಲ್ಲಿ ಸರಸ್ವತಿಯ ಶ್ವೇತಾ, ಕೆಂಪೇಗೌಡ ಪ್ರೌಢಶಾಲೆಯ ಪದ್ಮಶ್ರೀ, ಗುಡೇಮಾರನಹಳ್ಳಿಯ ರೂಪ - ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಮಂದಿರದ ಶ್ವೇತಾ - ಮೊದಲ ಸ್ಥಾನ, ಬಗಿನಗೆರೆಯ ವಾಣಿಶ್ರೀ - 2ನೇ ಸ್ಥಾನ, ಕೆಂಪೇಗೌಡ ಪ್ರೌಢಶಾಲೆಯ ಪದ್ಮಶ್ರೀ - ತೃತೀಯ ಸ್ಥಾನಗಳಿಸಿದ್ದಾರೆ.

ಉದ್ದಜಿಗಿತ ಸ್ಪರ್ಧೆಯಲ್ಲಿ ಕುದೂರಿನ ಲಾವಣ್ಯ, ಹೊಸಪಾಳ್ಯದ ಅನಿತಲಕ್ಷ್ಮಿ, ಲಕ್ಕೇನಹಳ್ಳಿ ವಸಂತಕುಮಾರಿ - ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳಿಸಿದ್ದಾರೆ. ಎತ್ತರ ಜಿಗಿತ ಕುದೂರಿನ ಲಾವಣ್ಯ, ಹುಲೀಕಟ್ಟೆಯ ಭವ್ಯ - ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.