ADVERTISEMENT

ನಾಮಫಲಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST
ನಾಮಫಲಕ ಉದ್ಘಾಟನೆ
ನಾಮಫಲಕ ಉದ್ಘಾಟನೆ   

ಮಾಗಡಿ: ದೀನ ದಲಿತರ ಸೇವೆಯೇ ದೇವರನ್ನು ಕಾಣುವ ಮಾರ್ಗ ಎಂದು ಚಿತ್ರದುರ್ಗ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.

ತಿರುಮಲ ಬೆಟ್ಟದ ನರಸಿಂಹ ದೇವಾಲಯದ ಬಳಿ ಪ್ರತಿಷ್ಠಾಪಿಸಿರುವ ಶಂಖ, ಚಕ್ರ ನಾಮಫಲಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಅರಮನೆ, ಗುರುಮನೆ, ಸೆರೆಮನೆ, ಕೋಟೆ ಕೊತ್ತಲ, ಕೆರೆಕಟ್ಟೆಗಳನ್ನು ಕಟ್ಟಿ ನಾಡಿನ ಸರ್ವರ ಅಭಿವೃದ್ಧಿಗೆ ಶ್ರಮಿಸಿರುವ ಬೋವಿ ಜನಾಂಗದವರನ್ನು ಶೋಷಿಸುವುದರ ಜೊತೆಗೆ ಎಲ್ಲಾ ರಂಗದಲ್ಲಿ ಕಡೆಗಣಿಸಲಾಗಿದೆ ಎಂದು ದೂರಿದರು.

ಸಮಾಜದ ಮುಖಂಡರಾದ ಹನುಮಾಪುರದ ರಾಮಯ್ಯ, ಮಾಕಳಿ ರವಿ, ಪುರಸಭೆ ಮಾಜಿ ಸದಸ್ಯ ಕೃಷ್ಣ ಕುಮಾರ್, ಲಕ್ಷ್ಮೀ ರಾಜಶೇಖರ್, ಶ್ರೀರಂಗಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್.ಸತೀಶ್. ಉಮಾಶಂಕರ್, ರಾಜಣ್ಣ, ಚಿಕ್ಕಣ್ಣ, ತುಳಸಮ್ಮ ರಾಮಯ್ಯ, ಬಸವರಾಜು ಈಡಿಗ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.