ಕುದೂರು (ಮಾಗಡಿ): ‘ಸಾಹಸ ಕಲೆಗ-ಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸು-ವುದರಿಂದ ಅವರಲ್ಲಿ ಧೈರ್ಯ ಹೆಚ್ಚು-ತ್ತದೆ’ ಎಂದು ತಾಲ್ಲೂಕು ಕರಾಟೆ ಅಕಾ-ಡೆಮಿ ಮುಖ್ಯಸ್ಥ ಸೆನ್‌ಸಾಯಿ ರಮೇಶ್ ತಿಳಿಸಿದರು.
ತಾಲ್ಲೂಕಿನ ಕುದೂರು ಗ್ರಾಮದ ಮಹಂತೇಶ್ವರ ಆಂಗ್ಲ ಮಾಧ್ಯಮ ಶಾಲೆ-ಯಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪರ್ವತಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಾಲ್ಯದಲ್ಲಿ ಮಕ್ಕಳಿಗೆ ಕಲಿಯುವ ಹುಮ್ಮಸು ಇರುವುದರಿಂದ ಈ ಅವಧಿ-ಯಲ್ಲಿಯೇ ಅವರಿಗೆ ವಿವಿಧ ಕಲೆಗಳನ್ನು ಕರಗತ ಮಾಡಿಸಬೇಕು’ ಎಂದರು.
ಸ್ಥಳೀಯರ ಸಹಾಯದ ಮೂಲಕ 2000 ಅಡಿಗಳಿಗೂ ಹೆಚ್ಚು ಎತ್ತರದ ಭೈರವನ ದುರ್ಗ ಬೆಟ್ಟದ ತುದಿಯ ವರೆಗೆ ನೂರಾರು ವಿದ್ಯಾರ್ಥಿಗಳು ಮತ್ತು ಕರಾಟೆ ಶಿಕ್ಷಕರು ಹತ್ತುವ ಮೂಲಕ ಸಾಹಸ ಮೆರೆದರು.
ಕಾಡು ದಾರಿಯಲ್ಲಿ ಕಾಣಿಸಿದ ಹಂದಿ, ಗುಬ್ಬಿ, ಗೊರವಾಂಕ, ಗೀಜಗ, ಮೊಲ, ಬಸವನ ಹುಳುಗಳನ್ನು ಕಂಡು ಮಕ್ಕಳು ಸಂತಸಪಟ್ಟರು. ಮೂರನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾವಹಿಸಿದ್ದರು.
ಭೈರವ ದುರ್ಗದ ಮೇಲೆ ಕೆಂಪೇಗೌಡರ ಕಾಲದ ಸಾಮಂತರು ಆಳಿದ ಕೋಟೆ, ನಾಲ್ಕು ಕಾಲಿನ ಮಂಟಪ , ಗೋಪುರ ಮತ್ತು ರಾಜರ ಕಾಲದ ಗುಪ್ತ ಗುಹೆ, ಕಲ್ಯಾಣಿಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.