ADVERTISEMENT

ಮಿನಿ ವಿಧಾನಸೌಧ ಕಾಮಗಾರಿ ಶೀಘ್ರ ಪೂರ್ಣ

ವಿವಿಧ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಉಸ್ತುವಾರಿ ಸಚಿವರು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2016, 6:52 IST
Last Updated 6 ಆಗಸ್ಟ್ 2016, 6:52 IST
ಕನಕಪುರ ನಗರದ ಶಿಕ್ಷಕರ ಭವನ ರಸ್ತೆ ಪೊಲೀಸ್‌ ಕ್ವಾರ್ಟ್‌ಸ್‌ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ್ದ ಟಿಎಪಿಸಿಎಂಎಸ್‌ ನ ಸಹಕಾರ ಬ್ಯಾಂಕ್‌ ಕಟ್ಟಡವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನೆರವೇರಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಆರ್‌. ಮಮತ. ಎಂ.ಎಲ್‌.ಸಿ. ಎಸ್‌.ರವಿ ಮತ್ತಿತರರು ಉಪಸ್ಥಿತರಿದ್ದರು
ಕನಕಪುರ ನಗರದ ಶಿಕ್ಷಕರ ಭವನ ರಸ್ತೆ ಪೊಲೀಸ್‌ ಕ್ವಾರ್ಟ್‌ಸ್‌ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ್ದ ಟಿಎಪಿಸಿಎಂಎಸ್‌ ನ ಸಹಕಾರ ಬ್ಯಾಂಕ್‌ ಕಟ್ಟಡವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ನೆರವೇರಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಆರ್‌. ಮಮತ. ಎಂ.ಎಲ್‌.ಸಿ. ಎಸ್‌.ರವಿ ಮತ್ತಿತರರು ಉಪಸ್ಥಿತರಿದ್ದರು   

ಕನಕಪುರ:  ವಿವಿಧ ಯೋಜನೆಯಡಿ ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಅಭಿವೃದ್ದಿ ಕಾಮಗಾರಿಗಳನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಚುನಾಯಿತ ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ತೆರಳಿ ಪರಿಶೀಲನೆ ನಡೆಸಿದರು.

ನಗರದ ಹೊರವಲಯದ ಬೂದಿಗುಪ್ಪೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಗಾಮಗಾರಿಯನ್ನು ವೀಕ್ಷಣೆ ಮಾಡಿ ಪರಿಶೀಲಿಸಿದ ಸಚಿವರು ಅತಿ ಶೀಘ್ರವಾಗಿ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡುವಂತೆ ಗುತ್ತಿಗೆದಾರರಿಗೆ ತಿಳಿಸಿದರು.

ನಗರ ಪೊಲೀಸ್ ಠಾಣೆ ಹಿಂಭಾಗದಲ್ಲಿ ಹಣ್ಣು ಮತ್ತು ಹೂ ತರಕಾರಿ ಮಾರಾಟಗಾರರಿಗಾಗಿ ನಿರ್ಮಾಣ ಮಾಡುತ್ತಿರುವ ಮಾರು ಕಟ್ಟೆಯ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ನಗರದಲ್ಲಿ ಅನೇಕ ಮಂದಿ ಬೀದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದಾರೆ ಅವರಿಗೆ ಒಂದು ನಿರ್ಧಿಷ್ಟವಾದ ಜಾಗ ಮಾಡಿಕೊಡಲು ಇಲ್ಲಿ ದೊಡ್ಡಮಟ್ಟದಲ್ಲಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ ಎಂದರು.

ಬಹುಮುಖ್ಯವಾಗಿ ತಾಲ್ಲೂಕಿನ ಎಲ್ಲಾ ಜನರಿಗೆ ಅಗತ್ಯವಾಗಿ ಬೇಕಿರುವ ತಾಲ್ಲೂಕು ಕಚೇರಿ ಹಾಗೂ ಇತರೆ ಇಲಾಖೆಗಳನ್ನು ಒಂದೇ ಸೂರಿನಡಿ ನಿರ್ಮಿಸಲು ನಗರದ ಹೃದಯ ಭಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುತ್ತಿದೆ, ಇನ್ನು ಕೆಲವೇ ತಿಂಗಳುಗಳಲ್ಲಿ ಕಟ್ಟಡವು ಪೂರ್ಣಗೊಳ್ಳಲಿದೆ ಎಂದು ಕಟ್ಟಡ ನಿರ್ಮಾಣ ಮಾಡುತ್ತಿರುವ ಎಲ್ಲಾ ಜಾಗವನ್ನು ವೀಕ್ಷಣೆ ಮಾಡಿದರು.

ನಂತರ ಮಳಗಾಳು ರಸ್ತೆಯ ಅರ್ಕಾವತಿ ನದಿಯ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವ ಅಂಬೇಡ್ಕರ್‌ ಭವನ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ಭವನವನ್ನು ಅತ್ಯಂತ ವಿನೂತನವಾಗಿ ಹಾಗೂ ಗುಣಮಟ್ಟದಿಂದ ನಿರ್ಮಾಣ ಮಾಡುತ್ತಿರುವುದರಿಂದ ಹೆಚ್ಚಿನ ಹಣ ಖರ್ಚಾ ಗುತ್ತಿದ್ದು ಅನುದಾನ ಕಡಿಮೆ ಇರುವುದರಿಂದ ಬೇರೆ ಅನುದಾನವನ್ನು ಹೊಂದಾಣಿಕೆ ಮಾಡಿ ನಿರ್ಮಾಣ ಮಾಡಲು ವಿಳಂಬವಾಗುತ್ತಿದೆ  ಎಂದರು.

ರೇಷ್ಮೆಗೂಡು ಮಾರುಕಟ್ಟೆ, ವಾಲ್ಮೀಕಿ ಮತ್ತು ಡಾ.ಬಾಬು ಜಗಜೀವನರಾಮ್‌ ಭವನಗಳ ಕಟ್ಟಡವನ್ನು ವೀಕ್ಷಣೆ ಮಾಡಿದರು. ರಾಜ್ಯ ಸಾರಿಗೆ ಬಸ್ಸುಗಳಿಗಾಗಿ ನಿರ್ಮಾಣ ಮಾಡುತ್ತಿರುವ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಉದ್ಘಾಟನೆ: ನಗರದ ಶಿಕ್ಷಕರ ಭವನ ರಸ್ತೆಯ ಪೊಲೀಸ್‌ ಕ್ವಾರ್ಟಸ್‌ ಪಕ್ಕದಲ್ಲಿ ಟಿ.ಎ.ಪಿ.ಸಿ.ಎಂ.ಎಸ್‌.  ನೂತನವಾಗಿ ನಿರ್ಮಾಣ ಮಾಡಿದ್ದ ಸಹಕಾರ ಬ್ಯಾಂಕ್‌ ಕಟ್ಟಡವನ್ನು ಉದ್ಘಾಟಿಸಿ, ಅತಿ ಚಿಕ್ಕಜಾಗದಲ್ಲಿ ಅತ್ಯುತ್ತಮವಾಗಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಬ್ಯಾಂಕಿನ ಕಟ್ಟಡ ನಿರ್ಮಾಣ ಮಾಡಿರುವುದಕ್ಕೆ ಮುಚ್ಚುಗೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಿ.ಎಂ.ಐ.ಸಿ. ಅಧ್ಯಕ್ಷ ಹೆಚ್.ಕೆ.ಶ್ರೀಕಂಠು, ಜಿಲ್ಲಾಧಿಕಾರಿ ಡಾ.ಮಮತಾ, ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರಪ್ರಸಾದ್‌, ತಹಸೀಲ್ದಾರ್ ಎಂ.ಆನಂದಯ್ಯ, ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗ ಗರಗ್, ಉಪನಿಬಂಧಕ ಲಕ್ಷೀಪತಯ್ಯ,

ಸಹಾಯಕ ನಿಬಂದಕ ಎನ್.ಭಾಸ್ಕರ್, ಮುಖ್ಯ ಕಾರ್ಯನಿರ್ವಾಹಕ ಡಿ.ಎಂ. ಮಹಮ್ಮದ್ ನದೀಂ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎಸ್.  ಯದುನಂದನಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಡಿ. ವಿಜಯದೇವ್, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಎನ್‌. ದಿಲೀಪ್‌ ಸೇರಿದಂತೆ ಟಿ.ಎ.ಪಿ.ಸಿ.ಎಂ.ಎಸ್‌.ನ  ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

*

ADVERTISEMENT

ಅಭಿವೃದ್ಧಿಯ ಎಲ್ಲ ಕಾಮಗಾರಿಗಳು ತ್ವರಿತವಾಗಿ ಆಗುತ್ತಿದ್ದು ನಿಗದಿತ ವೇಳೆಗೆ ಮುಗಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು
-ಡಿ.ಕೆ. ಶಿವಕುಮಾರ್,
ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.