ADVERTISEMENT

ಮುಂಗಾರು ಬೆಳೆ ವಿಮೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 19:30 IST
Last Updated 17 ಜೂನ್ 2011, 19:30 IST

ಮಾಗಡಿ: ತಾಲ್ಲೂಕಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಕೃಷಿ ಬೆಳೆ ವಿಮಾ ಯೋಜನೆಯನ್ನು 2011-12ನೇ ಸಾಲಿಗೆ ವಿಮೆ ಮಾಡಿಸಲು ಕೃಷಿ ಇಲಾಖೆ ಸರ್ಕಾರದ ಆದೇಶದಂತೆ ಸೂಚನೆ ಹೊರಡಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಾದೇಗೌಡ ಪ್ರಕಟಣೆ ನೀಡಿದ್ದಾರೆ.

ಕಸಬಾ ಮತ್ತು ಕುದೂರು ಹೋಬಳಿಗಳ ರೈತ ಬಾಂದವರು ಜೂ.30ರೊಳಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಿಗದಿ ಪಡಿಸಿರುವ ವಿಮಾ ಕಂತುಗಳನ್ನು ಪಾವತಿ ಮಾಡಿ ಸದರಿ ಸೌಲಭ್ಯಗಳನ್ನು ಪಡೆಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಕೃಷಿ ಬೆಳೆ ವಿಮಾ ಯೋಜನೆ ಕೃಷಿ ಬೆಳೆಗೆ ಆದ ನಷ್ಟದ ಪರಿಹಾರವನ್ನು ತುಂಬಿಕೊಡುವ ಒಂದು ಉತ್ತಮ ಯೋಜನೆಯಾಗಿದೆ.

ಮಳೆಯಾಶ್ರಿತ ರಾಗಿಗೆ ವಿಮೆ ಮೊತ್ತ ರೂ.10ಸಾವಿರ, ರೈತರು ಕಟ್ಟುವ ವಿಮಾ ಕಂತು ರೂ.250, ತೊಗರಿಗೆ ರೂ.12ಸಾವಿರ, ವಿಮಾಕಂತು ರೂ.300, ಮುಸುಕಿನ ಜೋಳಕ್ಕೆ ರೂ.10ಸಾವಿರ, ಕಂತಿನ ಹಣ ರೂ.250 ಆಗಿದೆ. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೆಶಕರ ಕಛೇರಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆದು ಕೊಂಡು ಅವಲತ್ತು ಪಡೆಯುವಂತೆ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.