ADVERTISEMENT

ಯುವ ಜನ ಮೇಳ: ಗೌರವ ಧನ ಹೆಚ್ಚಳಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:19 IST
Last Updated 13 ಡಿಸೆಂಬರ್ 2013, 9:19 IST

ರಾಮನಗರ: ‘ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಹಳೆಯ ನಿಯಮಗಳನ್ನೇ ಈಗಲೂ ಅನುಸರಿ ಸುತ್ತಿರುವುದರಿಂದ ಯುವ ಜನರಿಗೆ ಹೆಚ್ಚಿನ ಲಾಭವಾಗುತ್ತಿಲ್ಲ’ ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯ ಸಂಚಾಲಕ ಎಸ್.ಬಾಲಾಜಿ ಅಭಿ ಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಗುರು ಭವನದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಜನ ಮೇಳಗಳಲ್ಲಿ ಭಾಗ ವಹಿಸುವ ಯುವ ಜನರಿಗೆ ಹಳೆಯ ನಿಯಮಗಳಂತೆಯೇ ಗೌರವ ಧನವನ್ನು ಪಾವತಿಸುತ್ತಿದ್ದು, ಇದು ಏನೇನು ಸಾಲದು, ಕನಿಷ್ಠ ಒಂದು ಸಾವಿರ ರೂಪಾಯಿ ಗೌರವಧನವನ್ನು ಹೆಚ್ಚಿಸ ಬೇಕು’ ಎಂದು ಅವರು ಒತ್ತಾಯಿ ಸಿದರು.

ಈ ನಿಟ್ಟಿನಲ್ಲಿ ಇಲಾಖೆಯು ತನ್ನ ಯೋಜನೆಗಳಲ್ಲಿ ಬದಲಾವಣೆ ತಂದು ಯುವಜನರನ್ನು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.

ಬುಡಕಟ್ಟು ಕಲೆ ಪ್ರೋತ್ಸಾಹಿಸಿ: ‘ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜ್ ಮಾತನಾಡಿ, ಪ್ರಮುಖ ನೃತ್ಯ ಪ್ರಕಾರಗಳಾದ ಭರತ ನಾಟ್ಯ, ಕುಚುಪುಡಿ, ಸಂಗೀತ ಪ್ರಕಾರ ಗಳಾದ ಕರ್ನಾಟಕ ಸಂಗೀತ, ಹಿಂದೂ ಸ್ಥಾನಿ ಸಂಗೀತಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಬುಡಕಟ್ಟು, ಗುಡ್ಡಗಾಡು ಜನರ ಕಲಾಪ್ರಕಾರಗಳಿಗೆ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಿ. ನವಜ್ಯೋತಿ ಮಾತನಾಡಿ, ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಜಾನ ಪದ ನೃತ್ಯ, ಜಾನಪದ ಗೀತೆ, ನಾಟಕ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದ್ಯ, ಶಾಸ್ತ್ರೀಯ ನೃತ್ಯ, ಹಾರ್ಮೊನಿ ಯಂ, ಗಿಟಾರ್, ಆಶುಭಾಷಣ ಸ್ಪರ್ಧೆಗಳ ಆಯ್ಕೆ ಪ್ರಕ್ರಿಯೆ ನಡೆಸ ಲಾಗುತ್ತಿದೆ. ಇಲ್ಲಿ ಆಯ್ಕೆಯಾದ ತಂಡಗಳು ಮಂಡ್ಯ ಜಿಲ್ಲೆಯ ಕೀಲಾರ ದಲ್ಲಿ ಇದೇ 14 ರಿಂದ 16 ರವರೆಗೆ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಂಗೀತ ವಿದ್ವಾಂಸೆ ಶ್ರೀವಳ್ಳಿ, ಕ್ರೀಡಾ ತರಬೇತುದಾರ ಎಂ.ಪ್ರಭು, ಪಾರ್ಥ ಸಾರಥಿ, ಗಾಯಕ ರಾಮು ಪ್ರಾರ್ಥಿಸಿ ದರು. ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಣ್ಣ ನಿರೂಪಿಸಿದರು.  ಡಯಟ್ಟಿನ ಉಪನ್ಯಾಸಕ ಕೆಂಪರಾಜು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.