ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕಿರುವ ನಿತ್ಯಾನಂದ, ಅವರ ವಿರುದ್ಧ ಸಿಡಿದೆದ್ದಿರುವ ಚಾಲಕನಾಗಿದ್ದ ಲೆನಿನ್ ಕುರುಪ್ಪನ್ ಹಾಗೂ ಸ್ವಾಮಿಯ ಭಕ್ತರ ವಿರುದ್ಧದ ಕಾನೂನು ಸಮರ ದಿನದಿಂದ ದಿನಕ್ಕೆ ಏರುತ್ತಿದೆ.
ಈ ಮೂವರ ನಡುವೆ ಈಗಾಗಲೇ ಹೈಕೋರ್ಟ್ ಸೇರಿದಂತೆ, ಅಧೀನ ಕೋರ್ಟ್‌ಗಳಲ್ಲಿ ಪ್ರಕರಣ ಬಾಕಿ ಇರುವ ಮಧ್ಯೆಯೇ ನಿತ್ಯಾನಂದ ಶಿಷ್ಯೆ ಲೆನಿನ್ ವಿರುದ್ಧ ಹೈಕೋರ್ಟ್‌ಗೆ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ.ಲೆನಿನ್ ಅವರು ತಮ್ಮ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದರೂ, ಆ ಬಗ್ಗೆ ಬಿಡದಿ ಪೊಲೀಸರು ದೂರು ದಾಖಲು ಮಾಡಿಕೊಳ್ಳುತ್ತಿಲ್ಲ ಎನ್ನುವುದು ಸುಪ್ರೀಯಾನಂದ ಅಲಿಯಾಸ್ ಪುಷ್ಪಾ ಎಂಬುವವರ ದೂರು.
ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಅವರು ಕೋರಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಸಿಬಿಐ, ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.