ADVERTISEMENT

‘ಜಾಗತೀಕರಣದ ಸುಳಿಯಲ್ಲಿ ಕಲೆಗಳು’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 10:58 IST
Last Updated 4 ಜನವರಿ 2014, 10:58 IST

ರಾಮನಗರ: ಜಾಗತೀಕರಣದ ಸುಳಿ ಯಲ್ಲಿ ಸಿಲುಕಿ ಸಂಕಷ್ಟದ ಸ್ಥಿತಿಯಲ್ಲಿ ರುವಂತಹ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಂತಹ ಕೆಲಸವನ್ನು ಸಂಘ-ಸಂಸ್ಥೆಗಳು, ಕಲಾವಿದರು ಮಾಡ ಬೇಕು ಎಂದು ರೈತ ಸಂಘದ ಕಾರ್ಯ ದರ್ಶಿ ಸಿ.ಪುಟ್ಟಸ್ವಾಮಿ ಹೇಳಿದರು.

ತಾಲ್ಲೂಕಿನ ಕುಂಬಾಪುರ ಕಾಲೋನಿ ಯಲ್ಲಿ ಡಾ.ರಾಮ ಮನೋಹರ ಲೋಹಿಯಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನು ವಾರ ಸಂಜೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ವನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ವಾದ್ಯ ಪರಿಕರಗಳು ಸಂಘಟನೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತವೆ ಎಂದು ತಿಳಿಸಿದರು.

ಜಾನಪದ ಲೋಕದ ಸಂಯೋಜಕ ಡಾ.ಕುರುವ ಬಸವರಾಜು ಮಾತನಾಡಿ ಎಲ್ಲಾ ಕಲೆಗಳು ಜೀವನದ ಭಾಗವಾ ಗಿದ್ದು, ಜೀವನ ಪ್ರೀತಿಯನ್ನು ಗಟ್ಟಿಗೊಳಿ ಸುವ ಬದುಕಿನ ಆಸೆಗಳನ್ನು, ಇಷ್ಟಗ ಳನ್ನು, ಜೀವಂತಿಕೆಯನ್ನು ಕಟ್ಟಿ ಕೊಡುವ ಕೆಲಸ ಮಾಡಲಿ ಎಂದು ಆಶಿಸಿದರು.

ಉಪನ್ಯಾಸಕ ಜಿ.ಶಿವಣ್ಣ ಮಾತನಾಡಿ, ಜಾನಪದ ಸಂಸ್ಕೃತಿಯಲ್ಲಿ ಯಾವುದೇ ಜಾತಿ, ಮತ, ಬೇಧ, ಪಂತ ಎಂಬುದಿಲ್ಲ. ದುಡಿಮೆಯ ನೋವು, ಬದುಕಿನ ಕಷ್ಟಗಳನ್ನು ಮರೆತು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಉತ್ಸವಗಳು ವೇದಿಕೆಯಾಗು ತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಿ ಭಾರತ್ ಕೋ- ಆಪರೇಟಿವ್ ಬ್ಯಾಂಕ್‌ ನಿರ್ದೇಶಕ ಎಚ್.ಸಿ.ರಾಮಣ್ಣ, ಶಿಕ್ಷಕ ಹನುಮಯ್ಯ, ಡಾ.ರಾಮ ಮನೋಹರ ಲೋಹಿಯಾ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಅಧ್ಯಕ್ಷ ದಾಸಪ್ಪ, ಜನಮುಖಿ ಟ್ರಸ್ಟ್ನ ಕಾರ್ಯ ದರ್ಶಿ ವಿ. ಬಾಬು, ಪದಾಧಿಕಾರಿ ಗಳಾದ ವೆಂಕಟರಾಮು, ಜಿ. ಅನಿತಾ, ಕೃಷ್ಣಪ್ಪ, ಪಿಳ್ಳಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.