ADVERTISEMENT

‘ಮಾವು ಮಾಗಿಸಲು ರಾಸಾಯನಿಕ ಬಳಕೆ ಬೇಡ’

​ಪ್ರಜಾವಾಣಿ ವಾರ್ತೆ
Published 11 ಜೂನ್ 2015, 8:50 IST
Last Updated 11 ಜೂನ್ 2015, 8:50 IST

ಮಾಗಡಿ: ಮಾವು ಬೆಳೆಗಾರರು ಹಣ್ಣಗಳನ್ನು ಮಾಗಿಸಲು ರಾಸಾಯನಿಕಗಳನ್ನು ಬಳಸಬಾರದು. ನೈಸರ್ಗಿಕವಾಗಿಯೇ ಹಣ್ಣುಗಳು ಮಾಗಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ಜಿ.ಕೆ.ವಿ.ಕೆ. ಬೆಂಗಳೂರಿನ ಕೃಷಿ ಮಾರುಕಟ್ಟೆ ವಿಭಾಗದ ಪ್ರಾಧ್ಯಾಕ ಹಾಗೂ ಮುಖ್ಯಸ್ಥ ಡಾ. ಜಯರಾಮ್  ಸಲಹೆ ನೀಡಿದರು.

ತಾಲ್ಲೂಕಿನ ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ  ‘ಮಾವಿನಲ್ಲಿ ಕೊಯ್ಲು ಪೂರ್ವ ಮತ್ತು ಕೊಯ್ಲೋತ್ತರ ನಿರ್ವಹಣೆ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನೇರ ಮಾರುಕಟ್ಟೆಯನ್ನು ಕಲ್ಪಿಸುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಿ ನಾಲ್ಕು ಪಟ್ಟು ಅಧಿಕ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆ ವಿಭಾಗದಿಂದ ರೈತರಿಗೆ ನೇರ ಮಾರುಕಟ್ಟೆಯ ಬಗ್ಗೆ ಸಹಕಾರ ನೀಡಲಾಗುವುದು ಎಂದು ಭಾಗವಹಿಸಿದ ರೈತರಿಗೆ ತಿಳಿಸಿದರು.

ಕೃಷಿ ಅನುಸಂದಾನ ಪರಿಷತ್ತಿನ ವಲಯ ನಿರ್ದೇಶನಾಲಯ ಪ್ರಧಾನ ವಿಜ್ಞಾನಿ ಡಾ.ಸಿ.ವಿ.ಸಾಯಿರಾಂ,  ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ. ಕೆ. ಎಚ್. ನಾಗರಾಜ್,  ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಲಲಿತಾ, ಡಾ. ಮುರಳಿಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.