ADVERTISEMENT

10 ನಿರ್ದೇಶಕರ ಆಯ್ಕೆ

ಪಿಎಲ್‌ಡಿ ಆಡಳಿತ ಮಂಡಳಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 10:07 IST
Last Updated 17 ಸೆಪ್ಟೆಂಬರ್ 2013, 10:07 IST

ಚನ್ನಪಟ್ಟಣ:- ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕ್‌ (ಪಿಎಲ್‌ಡಿ) ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 10 ಮಂದಿ ನಿರ್ದೇಶಕರು ಆಯ್ಕೆಯಾದರು.

ಸಾಲಪಡೆಯದವರ ಕ್ಷೇತ್ರದಿಂದ ಡಿ.ಕೆ.ಕಾಂತರಾಜು, ಸಾಲಗಾರರ ಕ್ಷೇತ್ರ ಬಿ.ವಿ.ಹಳ್ಳಿಯಿಂದ ನಂದೀಶ್‌ ಕುಮಾರ್, ಕೋಡಂಬಳ್ಳಿಯಿಂದ ಲಿಂಗ ರಾಜೇಗೌಡ, ಕೃಷ್ಣಾಪುರದಿಂದ ಮರೀ ಗೌಡ, ಚೆಕ್ಕೆರೆಯಿಂದ ಎ.ಸಿ.ಪುಟ್ಟ ಸ್ವಾಮಿ, ಬೇವೂರಿನಿಂದಚಿಕ್ಕತಾಯಮ್ಮ, ನಾಗವಾರದಿಂದ ಪಿ.ಪುಟ್ಟಸ್ವಾಮಿ ಗೌಡ, ಹೊಂಗನೂರಿನಿಂದ ಲಕ್ಷ್ಮಮ್ಮ, ವೈ.ಟಿ.ಹಳ್ಳಿಯಿಂದ ರಾಜು, ನಗರ ಪ್ರದೇಶದಿಂದ ಆನಂದಬೀರಮ್ಮ ಚುನಾ ಯಿತರಾದರು. ಚುನಾವಣೆಗೂ ಮೊದಲು ಮುದಗೆರೆ ಕ್ಷೇತ್ರದಿಂದ ಪದ್ಮಮ್ಮ ಅವಿರೋಧವಾಗಿ ಅಯ್ಕೆ ಯಾಗಿದ್ದರು.

ಕಾಂಗ್ರೆಸ್‌ ಜಯಭೇರಿ: ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕ್‌ (ಪಿಎಲ್‌ಡಿ) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ 8 ಮಂದಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಈ ಬಾರಿ ಕೇವಲ ಇಬ್ಬರು ಜೆಡಿಎಸ್‌ ಪಕ್ಷದ ಬೆಂಬಲಿಗರು ಜಯ ಗಳಿಸಿದ್ದಾರೆ. ಖಾತೆ ತೆರೆದ ಬಿಜೆಪಿ:  ಇದೆ ಮೊದಲ ಬಾರಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯೊಬ್ಬರು ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಸಹಕಾರ ಬ್ಯಾಂಕ್‌ ಆಡಳಿತ ಮಂಡಳಿಯ ಚುನಾ ವಣೆಯಲ್ಲಿ ಜಯಗಳಿಸುವುದರ ಮೂಲಕ ಬಿಜೆಪಿ ಖಾತೆ ತೆರೆಯಿತು.

ಪಟ್ಟಣದ ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆನಂದಬೀರಮ್ಮ ಅವರು ಆಯ್ಕೆಯಾಗುವುದರ ಮೂಲಕ ಸ್ಥಳೀಯ ಸಂಸ್ಥೆಯೊಂದರ ಚುನಾವಣೆ ಯಲ್ಲಿ ಬಿಜೆಪಿಗೆ ಸ್ಥಾನ ತಂದುಕೊಟ್ಟರು.

ಆಯ್ಕೆ: ಪಟ್ಟಣದ ಕಲ್ಪವೃಕ್ಷ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆ ಯಲ್ಲಿ ಟಿ. ವಿ. ರಂಗಸ್ವಾಮಿ, ಕೆಂಪೇ ಗೌಡ, ಸಿದ್ದೇಗೌಡ, ನಿಂಗೆೇಗೌಡ, ಪಿ.ತಮ್ಮಯ್ಯ, ಟಿ. ಬಾಲುಕುಮಾರ್, ಸಿ.ಕೆ.ವಿಠಲ್, ಪಿ.ಸಿ.ಮಹದೇವ, ಶಿವ ಲಿಂಗಯ್ಯ, ಎಸ್.ಸಿ.ಶೇಖರ್ ಚುನಾ ಯಿತ ರಾಗಿದ್ದಾರೆ. ಚುನಾವಣೆಗೂ ಮೊದಲು ಲಿಂಗಮ್ಮ, ವಿಜಯಲಕ್ಷ್ಮಿ, ಎಚ್.ವಿ. ಚಂದ್ರು ಅವಿರೋಧವಾಗಿ ಆಯ್ಕೆ ಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.