ADVERTISEMENT

‘ಬಡ ಮಕ್ಕಳನ್ನು ದತ್ತು ಸ್ವೀಕರಿಸಿ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 13:22 IST
Last Updated 24 ಜೂನ್ 2019, 13:22 IST
ಮಾಗಡಿ ಕುದೂರಿನ ಸರ್ಕಾರಿ ಶಾಲೆ ಮಕ್ಕಳಿಗೆ ಅವಿರತ ಚಾರಣಿಗರ ತಂಡದಿಂದ ನೋಟ್‌ ಪುಸ್ತಕ ವಿತರಿಸಲಾಯಿತು
ಮಾಗಡಿ ಕುದೂರಿನ ಸರ್ಕಾರಿ ಶಾಲೆ ಮಕ್ಕಳಿಗೆ ಅವಿರತ ಚಾರಣಿಗರ ತಂಡದಿಂದ ನೋಟ್‌ ಪುಸ್ತಕ ವಿತರಿಸಲಾಯಿತು   

ಕುದೂರು(ಮಾಗಡಿ): ರೈತರ ಋಣ ತೀರಿಸಲು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಪುಣ್ಯದ ಕೆಲಸ ಎಂದು ‘ಅವಿರತ ಚಾರಣಿಗರ ತಂಡ’ದ ಯತೀಶ್‌ ಕುಮಾರ್‌ ಅಭಿಪ್ರಾಯಪಟ್ಟರು. ‌‌

ಚಾರಣಿಗರ ತಂಡದಿಂದ 11ನೇ ವರ್ಷದ ಅಂಗವಾಗಿ ಉಚಿತ ನೋಟ್‌ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳು ಮತ್ತು ಉದ್ಯಮಿಗಳು ಬಡವರ ಮಕ್ಕಳನ್ನು ದತ್ತು ಸ್ವೀಕರಿಸಿ ಶಿಕ್ಷಣ ಕೊಡಿಸಿ ರೈತರ ಋಣ ತೀರಿಸಲು ಮುಂದಾಗಬೇಕು ಎಂದರು.

ADVERTISEMENT

ಚಾರಣಿಗರ ತಂಡದ ಸದಸ್ಯೆ ತೇಜಸ್ವಿನಿ ಮಾತನಾಡಿ, ಗ್ರಾಮೀಣ ಭಾಗದ ಬಡ ಬಾಲಕಿಯರಿಗೆ ಎಲ್ಲರೂ ಹೆಚ್ಚಿನ ನೆರವು ನೀಡಿ ಅವರ ಜೀವನ ಸುಧಾರಣೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಸದಸ್ಯರಾದ ಗಣಪತಿ ಭಟ್, ಜಗದಾಂಬ, ಶ್ರೀನಿವಾಸಯ್ಯ, ಲಾವಣ್ಯ ಚನ್ನಪ್ಪ, ಅರುಣ್‌ ಕುಮಾರ್, ಲಕ್ಷ್ಮೀನಾರಾಯಣ್, ಶಂಕರ್, ಸುಮಂತ್‌, ಕೇಶವ್ ಇದ್ದರು.

ಒಂಭತ್ತನಗುಂಟೆ, ಗೊಲ್ಲಹಳ್ಳಿ, ತಿಪ್ಪಸಂದ್ರ ಹೋಬಳಿ ಬಸವನಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಪುಸ್ತಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.