ADVERTISEMENT

ರಕ್ತದಾನ ಮಾಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:08 IST
Last Updated 9 ನವೆಂಬರ್ 2021, 8:08 IST
ಬಿಡದಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಜ್ಞಾನವಿಕಾಸ ವಿದ್ಯಾ ಸಂಘದ ಎಲ್. ಸತೀಶ್ಚಂದ್ರ ಉದ್ಘಾಟಿಸಿದರು
ಬಿಡದಿಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಜ್ಞಾನವಿಕಾಸ ವಿದ್ಯಾ ಸಂಘದ ಎಲ್. ಸತೀಶ್ಚಂದ್ರ ಉದ್ಘಾಟಿಸಿದರು   

ಬಿಡದಿ: ರೋಟರಿ ಸೆಂಟ್ರಲ್ ಹಾಗೂ ಜ್ಞಾನ ವಿಕಾಸ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಸೋಮವಾರ ರಕ್ತದಾನ ಶಿಬಿರ ನಡೆಯಿತು. ನಟ ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಶಿಬಿರ ಉದ್ಘಾಟಿಸಿದ ಜ್ಞಾನವಿಕಾಸ ವಿದ್ಯಾಸಂಸ್ಥೆಯ ಎಲ್. ಸತೀಶ್ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಸಮಾಜ ಸೇವೆ ಮಾಡುವ ಜೊತೆಗೆ ರಕ್ತದಾನ ಮಾಡಬೇಕು. ಇದಕ್ಕೆ ರೋಟರಿ ಸಂಸ್ಥೆಯು ಸಹಕಾರ ನೀಡಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆವಹಿಸಿದ್ದ ಮುಖಂಡ ನಟರಾಜ್ ಮಾತನಾಡಿ, ವಿದ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಲು ವಿದ್ಯಾರ್ಥಿ ಜೀವನದಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಿದರೆ ನೊಂದ ಜೀವಗಳಿಗೆ ಆಸರೆಯಾಗಲಿದೆ. ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ಅನುಕೂಲವಾಗುತ್ತದೆ. ರಕ್ತದಾನ ಮಾಡಿದರೆ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಎಂದು
ಹೇಳಿದರು.

ರೋಟರಿ ಅಧ್ಯಕ್ಷ ವಸಂತಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಲ್ಲೇಶ್, ರೋಟೆರಿಯನ್ ಆನಂದ್, ರಮೇಶ್, ಶಿವಣ್ಣ, ಲೋಕೇಶ್, ಶಂಕರಣ್ಣ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಿ. ರೂಪಾ ಹಾಗೂ ಉಪನ್ಯಾಸಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.