ADVERTISEMENT

ಹೈನುಗಾರಿಕೆಯಲ್ಲಿ ಹಸಿರು ಮೇವಿನ ಪಾತ್ರ ಮಹತ್ವದ್ದು: ವಿಜ್ಞಾನಿ ಡಾ.ದಿನೇಶ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 12:54 IST
Last Updated 10 ಡಿಸೆಂಬರ್ 2018, 12:54 IST
ಹೈನುಗಾರಿಕೆಯಲ್ಲಿ ಹಸಿರು ಮೇವಿನ ತರಬೇತಿಯಲ್ಲಿ ವಿಜ್ಞಾನಿ ಡಾ, ದಿನೇಶ್‌.ಎಂ.ಎಸ್‌.ಮಾತನಾಡಿದರು.
ಹೈನುಗಾರಿಕೆಯಲ್ಲಿ ಹಸಿರು ಮೇವಿನ ತರಬೇತಿಯಲ್ಲಿ ವಿಜ್ಞಾನಿ ಡಾ, ದಿನೇಶ್‌.ಎಂ.ಎಸ್‌.ಮಾತನಾಡಿದರು.   

ಮಾಗಡಿ: ಹೈನುಗಾರಿಕೆಯಲ್ಲಿ ನೂತನ ಹಸಿರು ಮೇವಿನ ತಳಿ ಮತ್ತು ಅಜೊಲ್ಲಾದ ಪಾತ್ರ ಮಹತ್ವವಾಗಿದೆ ಎಂದು ಕೆವಿಕೆ ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ದಿನೇಶ್‌.ಎಂ.ಎಸ್‌.ತಿಳಿಸಿದರು.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ನಡೆದ ‘ಹಸಿರು ಮೇವಿನ ತಳಿ ಮತ್ತು ಅಜೋಲ್ಲಾದ ಪಾತ್ರ ಕುರಿತ ತರಬೇತಿ’ಯಲ್ಲಿ ಅವರು ಮಾತನಾಡಿದರು.

ವರ್ಷವಿಡೀ ಹಸಿರು ಮೇವಿನ ತಳಿ ಮತ್ತು ಅಜೊಲ್ಲಾ ಬೆಳೆಸಿ, ಹೈನುಗಾರಿಕೆ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸಬಲೀಕರಣ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

ಸೋಲೂರು ಡೇರಿ ಉಪ ವ್ಯವಸ್ಥಾಪಕ ಡಾಶ್ರೀನಿವಾಸ್ ಮಾತನಾಡಿ, ಸಮರ್ಪಕ ಪಶು ಆಹಾರ ನಿರ್ವಹಣೆ ಬಗ್ಗೆ ಕೃಷಿ ವಿಜ್ಞಾನಿಗಳು ನೀಡುವ ಸಲಹೆಯನ್ನು ರೈತರು ಸ್ವೀಕರಿಸಬೇಕು ಎಂದು ಹೇಳಿದರು.

ಕೆಎಂಎಫ್‌ನ ಕೃಷಿ ಅಧಿಕಾರಿ ದಿವ್ಯ ಅವರು ಕೆಎಂಎಫ್ ವತಿಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ ಅವರು ಕೇಂದ್ರದ ಧ್ಯೇಯೋದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.