ADVERTISEMENT

ಅಂಗನವಾಡಿ ಕೇಂದ್ರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:16 IST
Last Updated 9 ನವೆಂಬರ್ 2021, 8:16 IST
ಮಾಗಡಿ ಪಟ್ಟಣದ ಸೋಮೇಶ್ವರ ಬಡಾವಣೆಯ ವಡ್ಡರಪಾಳ್ಯ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಸುರೇಂದ್ರ ಪುಟಾಣಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕರ್ತೆ ಮೀನಾ ಜಯರಾಮ್‌, ಸಹಾಯಕಿ ಚಂದ್ರಮ್ಮ, ಪೋಷಕರು ಇದ್ದರು
ಮಾಗಡಿ ಪಟ್ಟಣದ ಸೋಮೇಶ್ವರ ಬಡಾವಣೆಯ ವಡ್ಡರಪಾಳ್ಯ ಅಂಗನವಾಡಿ ಕೇಂದ್ರದಲ್ಲಿ ಸಿಡಿಪಿಒ ಸುರೇಂದ್ರ ಪುಟಾಣಿಗಳಿಗೆ ಪುಷ್ಪ ನೀಡಿ ಸ್ವಾಗತಿಸಿದರು. ಕಾರ್ಯಕರ್ತೆ ಮೀನಾ ಜಯರಾಮ್‌, ಸಹಾಯಕಿ ಚಂದ್ರಮ್ಮ, ಪೋಷಕರು ಇದ್ದರು   

ಮಾಗಡಿ: ಕೊರೊನಾ ಸೋಂಕಿನಿಂದ ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಸೋಮವಾರದಿಂದ ಪುನರಾರಂಭಗೊಂಡವು.

ಪಟ್ಟಣದ ಸೋಮೇಶ್ವರ ಬಡಾವಣೆಯ ವಡ್ಡರಪಾಳ್ಯದ ಅಂಗನವಾಡಿಯಲ್ಲಿ ತಳಿರುತೋರಣ ಕಟ್ಟಿ, ಪುಟಾಣಿಗಳಿಗೆ ಸಿಡಿಪಿಒ ಸುರೇಂದ್ರ ಮತ್ತು ಕಾರ್ಯಕರ್ತೆ ಮೀನಾ ಜಯರಾಮ್‌ ಹೂವು ನೀಡಿ ಸ್ವಾಗತಿಸಿದರು. ಬಳಿಕ ಸಿಹಿ ವಿತರಿಸಲಾಯಿತು. ಸಹಾಯಕಿ ಚಂದ್ರಮ್ಮ ಹಾಗೂ ಪೋಷಕರು ಇದ್ದರು.

ಕೇಂದ್ರದ ಮುಂಭಾಗ ರಂಗೋಲಿ ಹಾಕಲಾಗಿತ್ತು. ಮಕ್ಕಳಿಗೆ ಅಟಿಕೆಗಳನ್ನು ನೀಡಿ ಆಡಿಸಲಾಯಿತು. ಮುತ್ತುಸಾಗರ ಮತ್ತು ಬಿಸ್ಕೂರು ಅಂಗನವಾಡಿ ಕೇಂದ್ರಗಳಲ್ಲಿ ಬಿಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ದೊಡ್ಡಯ್ಯ, ಉಪಾಧ್ಯಕ್ಷೆ ಗಂಗಮ್ಮ ಶಿವಣ್ಣ, ಸದಸ್ಯೆ ಮುಬಿನಾ ಸುಹೇಲ್‌, ಅಂಗನವಾಡಿ ಕಾರ್ಯಕರ್ತೆ ಮಲ್ಲಿಕಾಂಬ, ರವಿಕುಮಾರ್‌, ವಸಂತಪ್ಪ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು.

ADVERTISEMENT

ಸೋಲೂರು ಅಂಗನವಾಡಿ ಕೇಂದ್ರ ಮತ್ತು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ ಸ್ವಾಗತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.