ADVERTISEMENT

ಅರ್ಕೇಶ್ವರ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 13:23 IST
Last Updated 27 ಫೆಬ್ರುವರಿ 2021, 13:23 IST
ರಾಮನಗರದಲ್ಲಿ ಶನಿವಾರ ಅರ್ಕೇಶ್ವರ ರಥೋತ್ಸವ ನಡೆಯಿತು
ರಾಮನಗರದಲ್ಲಿ ಶನಿವಾರ ಅರ್ಕೇಶ್ವರ ರಥೋತ್ಸವ ನಡೆಯಿತು   

ರಾಮನಗರ: ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಅರ್ಕೇಶ್ವರ ಸ್ವಾಮಿಯ ರಥೋತ್ಸವವು ಶನಿವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಇದೇ ಮೊದಲ ಬಾರಿಗೆ ರಾಮನ ರಥದಲ್ಲಿ ಅರ್ಕೇಶ್ವರ ಸ್ವಾಮಿಯ ರಥೋತ್ಸವ ನೆರವೇರಿದ್ದು ವಿಶೇಷವಾಗಿತ್ತು. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಅರ್ಕೇಶ್ವರ ಸ್ವಾಮಿಯ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವವನ್ನು ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅರ್ಕೇಶ್ವರ ಸ್ವಾಮಿ ರಥ ಚಕ್ರಗಳು ಕೈಕೊಟ್ಟಿತ್ತು. ಹೀಗಾಗಿ ಶ್ರೀರಾಮದೇವರ ರಥದಲ್ಲಿ ಈಶ್ವರ ಮೂರ್ತಿಯನ್ನು ಸ್ಥಾಪನೆ ಮಾಡಿ, ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಬೆಳಿಗ್ಗೆ 8ರಿಂದ 9 ಗಂಟೆಯ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹರಹರ ಮಹಾದೇವ ಎಂಬ ಘೋಷಣೆ ಕೂಗುತ್ತ ತೇರು ಎಳೆದರು. ರಥಕ್ಕೆ ಬಾಳೆಹಣ್ಣು ಹವನ ಎಸೆದು ಭಕ್ತಿ ಅರ್ಪಿಸಿದರು. ಜಾತ್ರೋತ್ಸವದ ಪ್ರಯುಕ್ತ ಜಾನಪದ ಕಲಾತಂಡಗಳು ಸಾಥ್ ನೀಡಿದವು. ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಗರದ ಅಗ್ರಹಾರ, ಎಂ.ಜಿ.ರಸ್ತೆ, ಗಣೇಶ ದೇವಾಲಯದ ರಸ್ತೆ, ಛತ್ರದ ಬೀದಿ ಬಳಸಿದ ರಥವು ಸಂಜೆಯ ವೇಳೆಗೆ ದೇವಾಲಯವನ್ನು ಸೇರಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.