ಚನ್ನಪಟ್ಟಣ: ಪಟ್ಟಣದ ಸಾಯಿ ಲೇಔಟ್‌ನಲ್ಲಿ ಗುರುವಾರ ಮನೆಯ ಮುಂದೆ ಗಿಡಗಳಿಗೆ ನೀರು ಹಾಕುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕದಿಯಲು ಯತ್ನಿಸಿದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾಮನಗರದ ರಾಮದೇವರ ಬೆಟ್ಟದ ವೆಂಕಟೇಶ್ ಮತ್ತು ಮಹದೇವ್ ಬಂಧಿತರು.
ಗಿಡಗಳಿಗೆ ನೀರು ಹಾಕುತ್ತಿದ್ದಸರೋಜಮ್ಮ ಹಿಂಬದಿಯಿಂದ ಬಂದ ಆರೋಪಿಗಳು ಮಹಿಳೆಯ ಬಾಯಿ ಮುಚ್ಚಿ ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಮಹಿಳೆ ಕೂಗಿಕೊಂಡಾಗ ಸ್ಥಳೀಯರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜೂಜಾಟ: ಆರು ಮಂದಿ ಬಂಧನ
ರಾಮನಗರ: ತಾಲ್ಲೂಕಿನ ಕವಣಾಪುರ ಗ್ರಾಮದ ಬಳಿ ಇಸ್ಪೀಟ್ ಜೂಜಿನಲ್ಲಿ ತೊಡಗಿದ್ದ ಆರುಮಂದಿಯನ್ನು ರಾಮನಗರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿನೋದ್‌ಕುಮಾರ್ (32), ಅರುಣ್‌ಕುಮಾರ್ (27), ಸಿದ್ದೇಶ್ (35), ಬಾಬು (44), ಚಂದ್ರು (43) ಹಾಗೂ ವಾಸು (26) ಬಂಧಿತರು. ಇವರಿಂದ ₹ 40,080 ನಗದು ವಶಪಡಿಸಿಕೊಳ್ಳಲಾಗಿದೆ.ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.