ADVERTISEMENT

ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ಬೈಕ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 12:56 IST
Last Updated 18 ನವೆಂಬರ್ 2018, 12:56 IST
ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ಭಾನುವಾರ ಬೈಕ್‌ ಜಾಥಾ ನಡೆಯಿತು
ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ಭಾನುವಾರ ಬೈಕ್‌ ಜಾಥಾ ನಡೆಯಿತು   

ರಾಮನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ವತಿಯಿಂದ ನಗರದಲ್ಲಿ ಭಾನುವಾರ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಅರ್ಚಕರಹಳ್ಳಿಯ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಜಾಥಾಕ್ಕೆ ಚಾಲನೆ ದೊರೆಯಿತು. ತೆರೆದ ವಾಹನದಲ್ಲಿ ಶ್ರೀರಾಮ ದೇವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗಯಿತು. ‘ಅಯೋಧ್ಯೆಯಲ್ಲಿ ರಾಮಮಂದಿರ ಆದಷ್ಟು ಬೇಗ ನಿರ್ಮಾಣವಾಗಬೇಕು’, ‘ಇದೇ 25ರಂದು ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಶ್ರೀರಾಮಜನ್ಮಭೂಮಿ ಭವ್ಯಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು’, ‘ಜೈ ಶ್ರೀರಾಮ್‌’ ಸೇರಿದಂತೆ ಹಲವು ಘೋಷಣೆಗಳನ್ನು ಕೂಗಿದರು.

ಜತೆಗೆ ವಿಶ್ವ ಹಿಂದೂ ಪರಿಷದ್ ವತಿಯಿಂದ ಪ್ರಕಟಿಸಲಾಗಿರುವ ಕರಪತ್ರಗಳನ್ನು ವಿತರಿಲಾಯಿತು. ಬೈಕ್‌ ಜಾಥಾ ಶ್ರೀರಾಮ ದೇವಾಲಯದ ಆವರಣದಲ್ಲಿ ಕೊನೆಗೊಂಡಿತು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್‌್ ಗೌಡ, ವಿಶ್ವ ಹಿಂದೂ ಪರಿಷದ್‌ನ ಪದಾಧಿಕಾರಿಗಳಾದ ಅನಿಲ್‌ಬಾಬು, ಹರೀಶ್‌, ಚಂದನ್‌ಮೋರೆ, ಉಮೇಶ್, ಕಣ್ಣನ್‌, ಬಾಲು ವೆಂಕಟೇಶ್, ಎಸ್.ಆರ್. ನಾಗರಾಜು, ರುದ್ರದೇವರು, ಚನ್ನಪ್ಪ, ಪಿ. ಶಬರಿ, ಸುನೀಲ್, ಮಂಜುನಾಥ್, ಬಸವರಾಜು, ಕಾಳಯ್ಯ, ಮಂಜು, ಚಂದ್ರಶೇಖರರೆಡ್ಡಿ, ಹೊನ್ನಪ್ಪ, ಈಶ್ವರ್‌, ವೀರಯ್ಯ, ಬದ್ರಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.