ಸಾಂದರ್ಭಿಕ ಚಿತ್ರ
ರಾಮನಗರ: ಮೈಸೂರಿಗೆ ಬಿಜೆಪಿ–ಜೆಡಿಎಸ್ ನಡೆಸುತ್ತಿದ್ದ ಪಾದಯಾತ್ರೆ ವೇಳೆ ಬಿಜೆಪಿ ಕಾರ್ಯಕರ್ತರು ನ್ಯೂಸ್ ಫಸ್ಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಶಾಸಕರ ಹರೀಶ್ ಪೂಂಜಾ ಬೆಂಬಲಿಗರಿಂದ ಹಲ್ಲೆ ನಡೆದಿದೆ. ವರದಿಗಾರರಾದ ಜಿ.ಮಂಜುನಾಥ, ಮೋಹನ್, ಕ್ಯಾಮೆರಾ ಮೆನ್ ಅವಿರಾಜ್, ಚಾಲಕ ಆನಂದ್ ಮೇಲೆ ಹಲ್ಲೆಯಾಗಿದೆ.
ವರದಿ ಮಾಡಲು ತೆರಳುತ್ತಿದ್ದ ವೇಳೆ ಕಾರು ಅಡ್ಡಗಟ್ಟಿ ಕತ್ತು ಹಿಸುಕಿ ಕಾಲಿಂದ ಒದ್ದು ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
ಈ ವೇಳೆ ಶಾಸಕ ಹರೀಶ್ ಪೂಂಜಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.