ADVERTISEMENT

ಕನಕಪುರ: ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 14:24 IST
Last Updated 10 ಅಕ್ಟೋಬರ್ 2024, 14:24 IST
ಪ್ರದ್ವಿನ್
ಪ್ರದ್ವಿನ್   

ಕನಕಪುರ: ಮನೆ ಮುಂದಿನ ಅಂಗಳದಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕ ನೀರಿನ ತೊಟ್ಟಿಗೆ ಬಿದ್ದು ಸಾವನಪ್ಪಿರುವ ಘಟನೆ ಅಡಕೆ ಹಳ್ಳ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಅಡಕೆ ಹಳ್ಳ ಗ್ರಾಮದ ಸಿಂಧು ಮತ್ತು ಶ್ರೀನಿವಾಸ್ ದಂಪತಿಯ ಮೂರು ವರ್ಷದ ಬಾಲಕ ಪ್ರಧ್ವಿನ್ ಸಾವನಪ್ಪಿರುವ ದುರ್ದೈವಿ.

ಅಡಕೆ ಹಳ್ಳ ಗ್ರಾಮದ ಸಿಂಧು ಅವರನ್ನು ತಾಲ್ಲೂಕಿನ ಮಾದರಳ್ಳಿಯ ಶ್ರೀನಿವಾಸ್ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು, ದಂಪತಿಗೆ ಮೂರು ವರ್ಷದ ಪ್ರದ್ವಿನ್ ಇದ್ದು ಎರಡನೇ ಹೆರಿಗೆಗೆಂದು ಸಿಂಧು ತವರು ಮನೆಯಾದ ಅಡಕೆ ಹಳ್ಳಕ್ಕೆ ಬಂದಿದ್ದರು.

ADVERTISEMENT

ಶ್ರೀನಿವಾಸ್ ಆಟೋ ಚಾಲಕರಾಗಿದ್ದು ಅವರು ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು, ಬುಧವಾರ ಸಂಜೆ ಅಡಕೆ ಹಳ್ಳ ಗ್ರಾಮದ ಸಿಂಧು ಮನೆ ಮುಂಭಾಗದಲ್ಲಿ ಚಂಡಿನೊಂದಿಗೆ ಆಟ ಆಡುತ್ತಿದ್ದ ಪ್ರದ್ವಿನ್, ಚಂಡು ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದೆ, ಅದನ್ನು ತೆಗೆದುಕೊಳ್ಳಲು ಹೋಗಿ ಮಗು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನಪ್ಪಿದೆ.

ಎಷ್ಟು ಹೊತ್ತಾದರೂ ಮಗು ಮನೆಗೆ ಬಾರದಿದ್ದರಿಂದ ಆತಂಕಗೊಂಡು ಸಿಂಧು ಮತ್ತು ಅವರ ಪೋಷಕರು ಹುಡುಕಾಡಿದಾಗ ಮಗು ನೀರಿನ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ.

ಮಗುವನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.