ADVERTISEMENT

ರೈತರ ಸಮಸ್ಯೆ ಬಗೆಹರಿಸಲು ಅಧಿಕಾರಶಾಹಿ ಹಿಂದೇಟು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:57 IST
Last Updated 21 ಸೆಪ್ಟೆಂಬರ್ 2021, 4:57 IST
ಮಾಗಡಿಯಲ್ಲಿ ರೋಟರಿ ಮಾಗಡಿ ಸೆಂಟ್ರಲ್‌ ವತಿಯಿಂದ ನಡೆದ ಸ್ತ್ರೀರೋಗ ಮತ್ತು ಬಂಜೆತನ ನಿವಾರಣಾ ಉಚಿತ ಆರೋಗ್ಯ ಶಿಬಿರದಲ್ಲಿ ಡಾ.ಅರುಣಾ ಸಹದೇವ್‌, ಅಧ್ಯಕ್ಷ ಮಹಂತೇಶ್‌, ಕಾರ್ಯದರ್ಶಿ ಪ್ರಭಾಕರ್‌ ಎಲ್‌., ಶಂಕರ್‌, ಲೋಕೇಶ್‌ ಇದ್ದರು
ಮಾಗಡಿಯಲ್ಲಿ ರೋಟರಿ ಮಾಗಡಿ ಸೆಂಟ್ರಲ್‌ ವತಿಯಿಂದ ನಡೆದ ಸ್ತ್ರೀರೋಗ ಮತ್ತು ಬಂಜೆತನ ನಿವಾರಣಾ ಉಚಿತ ಆರೋಗ್ಯ ಶಿಬಿರದಲ್ಲಿ ಡಾ.ಅರುಣಾ ಸಹದೇವ್‌, ಅಧ್ಯಕ್ಷ ಮಹಂತೇಶ್‌, ಕಾರ್ಯದರ್ಶಿ ಪ್ರಭಾಕರ್‌ ಎಲ್‌., ಶಂಕರ್‌, ಲೋಕೇಶ್‌ ಇದ್ದರು   

ಮಾಗಡಿ: ತಾಲ್ಲೂಕಿನ ರೈತರ ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯವಹಿಸಿರುವ ಕಂದಾಯ ಮತ್ತು ಭೂ ಮಾಪನಾ ಇಲಾಖೆ ಬಗ್ಗೆ ಶಾಸಕ ಎ. ಮಂಜುನಾಥ್‌ ಗಮನಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಾಚೇನಹಟ್ಟಿ ಗ್ರಾ.ಪಂ. ಮಾಜಿ ಸದಸ್ಯ ರಾಮಣ್ಣ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,ತಾಲ್ಲೂಕಿನಲ್ಲಿ ವಿವಿಧ ರಾಜಕೀಯ ಪಕ್ಷದ ನೂರಾರು ಮುಖಂಡರಿದ್ದಾರೆ. ಯಾರು ಸಹ ರೈತರು, ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕನಿಷ್ಠ ಕಾಳಜಿವಹಿಸುತ್ತಿಲ್ಲ. ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.

ನ್ಯಾಯಾಲಯದ ಆದೇಶದಂತೆ ನಾವು ನಾಲ್ವರು ಸಹೋದರರು ಕರಲಮಂಗಲ ಸರ್ವೆ ನಂ. 22/1, ಮರಲಗೊಂಡಲ ಸರ್ವೆ ನಂ. 79/3ರ ಸರ್ವೆ ಮಾಡಿಸಲು 2019ರ ಜೂನ್‌ 19ರಂದು ₹ 4,800 ಕಟ್ಟಿದ್ದೇವೆ. ಇಲ್ಲಿಯವರೆಗೆ ಕಚೇರಿಗೆ ಅಲೆಸಿದ ಅಧಿಕಾರಿಗಳು ಅರ್ಜಿಯು ಆರ್‌ಆರ್‌ಟಿ ಸೆಕ್ಷನ್‌ನಲ್ಲಿದೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.

ADVERTISEMENT

ಭೂ ಮಾಪನಾ ಇಲಾಖೆ ಅಧಿಕಾರಿಗಳೇ ಮಾಡಿರುವ ತಪ್ಪುಗಳಿಗೆ ರೈತರನ್ನು ಸುತ್ತಿಸುವುದು ಯಾವ ನ್ಯಾಯ. ಹಿರಿಯ ಅಧಿಕಾರಿಗಳು ಒಂದು ತಿಂಗಳು ಬಿಟ್ಟು ಬನ್ನಿ ನೋಡೋಣ. ಆಕಾರ್‌ ಬಂದ್‌ ತರಿಸಿ ಆಗಿರುವ ತಪ್ಪು ಸರಿಪಡಿಸುವೆ ಎಂದು ಹೇಳಿದ್ದಾರೆ. ರೈತರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.