ಚನ್ನಪಟ್ಟಣ: ಕರ್ನಾಟಕ ರಾಜ್ಯ ಪ್ರಾದೇಶಿಕ ಕುರುಬರ ಸಂಘ, ಚನ್ನಪಟ್ಟಣ ತಾಲ್ಲೂಕು ಶಾಖೆ ವತಿಯಿಂದ ನಗರದ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತಿ ಆಚರಿಸಲಾಯಿತು.
ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ರಾಷ್ಟ್ರಗೀತೆ ಹಾಡುವುದರ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.
ಶಿಕ್ಷಕರ ಅಮ್ಮಳ್ಳಿದೊಡ್ಡಿ ನಾಗೇಂದ್ರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರು ಕಿತ್ತೂರುರಾಣಿ ಚನ್ನಮ್ಮ ಅವರ ಮಾನಸ ಪುತ್ರನಾಗಿದ್ದ. ಬ್ರಿಟೀಷರ ವಿರುದ್ಧ ಇವರ ಹೋರಾಟದ ವೀರಾವೇಶ ಬ್ರಿಟಿಷರ ನಿದ್ದೆ ಕೆಡಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣನ ಸಮಾಧಿ, ಸೈನಿಕ ಶಾಲೆ ಮತ್ತು ವಸ್ತು ಪ್ರದರ್ಶನಾಲಯವನ್ನು ಗ್ರಾಮದಲ್ಲಿ ಸ್ಥಾಪಿಸಿ ಗೌರವ ಸಲ್ಲಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಶೌರ್ಯ ಪ್ರಶಸ್ತಿಗೆ ಪಾತ್ರರಾದವರಿಗೆ ಸಂಗೊಳ್ಳಿರಾಯಣ್ಣ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ಹೆಮ್ಮೆಯ ವಿಷಯ ಎಂದರು.
ಸಮುದಾಯದ ಹಿರಿಯ ಮುಖಂಡ ಹನಿಯೂರು ಶಿವಬೀರಯ್ಯ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಸಂಗೊಳ್ಳಿ ರಾಯಣ್ಣ ಹೋರಾಟವೇ ಸ್ಫೂರ್ತಿ ಎಂದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಾಮಣ್ಣ, ನಗರಸಭೆ ಸದಸ್ಯ ಕೆ.ಮಂಜುನಾಥ್, ಮುಖಂಡರಾದ ಬಿ.ವೆಂಕಟೇಶ್, ಕೋಡಂಬಹಳ್ಳಿ ಬೀರಯ್ಯ, ಚಾಕಿ ಗಣೇಶ್, ಲಾಳಾಘಟ್ಟ ನವಲೇಶ್, ಶೆಟ್ಟಿಹಳ್ಳಿ ನಾಗೇಶ್, ಪೌಳಿದೊಡ್ಡಿ ರಾಜೇಶ್, ಜಯಲಕ್ಷ್ಮಿ, ಸುಣ್ಣಘಟ್ಟ ಸತೀಶ್, ಹೋಟೆಲ್ ಮನು, ಶಿವಬೀರಯ್ಯ, ಅಮ್ಮಳ್ಳಿದೊಡ್ಡಿ ರವಿ, ಕೋಡಂಬಹಳ್ಳಿ ಶಿವಕುಮಾರ್, ಮಂಗಳವಾರಪೇಟೆ ರಾಘವೇಂದ್ರ, ರವಿ, ಹುಚ್ಚಯ್ಯನದೊಡ್ಡಿ ಶಿವಣ್ಣ, ಹೊಸೂರುದೊಡ್ಡಿ ರೇವಣ್ಣ, ದೇವರಾಜು, ಚಂದ್ರು, ಕೋಡಂಬಹಳ್ಳಿ ಶಿವಬೀರಯ್ಯ, ಮಾರೇಗೌಡನದೊಡ್ಡಿ ಮಾದೇಶ್, ಎಲೇಕೇರಿ ಪುಟ್ಟಸ್ವಾಮಿ ಇತರರು ಹಾಜರಿದ್ದರು. ಗಾಯಕ ಚೌ.ಪು.ಸ್ವಾಮಿ ಕ್ರಾಂತಿ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.