ADVERTISEMENT

ಕನಕಪುರ: ನದಿತಡದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 6:19 IST
Last Updated 23 ಮಾರ್ಚ್ 2024, 6:19 IST
ಕನಕಪುರ ಮಳಗಾಳು ರಸ್ತೆಯ ಅರ್ಕಾವತಿ ನದಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿದರು
ಕನಕಪುರ ಮಳಗಾಳು ರಸ್ತೆಯ ಅರ್ಕಾವತಿ ನದಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿದರು   

ಕನಕಪುರ: ಇಲ್ಲಿನ ಮಳಗಾಳು ರಸ್ತೆಯ ಅರ್ಕಾವತಿ ನದಿ ತೀರ ಮತ್ತು ದಡದಲ್ಲಿ ಗುರುವಾರ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ರೂರಲ್‌ ಪದವಿ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪರಿಸರ ಸ್ವಚ್ಛತೆ ಮತ್ತು ಪ್ಲಾಸ್ಟಿಂಗ್‌ ಸಂಗ್ರಹ ಕಾರ್ಯ ನಡೆಯಿತು.

ಪರಿಸರ ಸ್ವಚ್ಛತೆಗೆ ಸಂಬಂಧಿಸಿದಂತೆ ಭಾರತದ ಎನ್‌ಸಿಸಿ ಘಟಕವು ವಿಶ್ವಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಂತೆ ನದಿ, ಸಮುದ್ರ, ಕೆರೆಯ ದಂಡೆಯ ಮೇಲಿರುವ ಪ್ಲಾಸ್ಟಿಕ್ ತಾಜ್ಯವನ್ನು ಸಂಗ್ರಹಿಸುವ ಮತ್ತು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದು ಇಂದು ಇಲ್ಲಿನ ಅರ್ಕಾವತಿ ನದಿ ಪಾತ್ರದಲ್ಲಿನ ಪ್ಲಾಸ್ಟಿಕ್‌ ಮತ್ತು ಮದ್ಯದ ಬಾಟಲಿಗಳನ್ನು ಎನ್‌ಸಿಸಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ ಎಂದು ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್‌ ವಿಜಯೇಂದ್ರ ಎಂ.ಜೆ.  ಮಾಹಿತಿ ನೀಡಿದರು.

ಕನಕಪುರ ಅರ್ಕಾವತಿ ನದಿಯಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳು ಸಂಗ್ರಹಿಸಿರುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಗರಸಭೆ ವಾಹನಕ್ಕೆ ತಂಬುತ್ತಿರುವುದು

ಗುರುವಾರ ಸುಮಾರು ಒಂದು ಟ್ಯಾಕ್ಟರ್‌ನಷ್ಟು ತ್ಯಾಜ್ಯ ಸಂಗ್ರಹವಾಗಿದೆ. ನಗರಸಭೆಯರು ಈ ತ್ಯಾಜ್ಯವನ್ನು  ವೈಜ್ಞಾನಿಕವಾಗಿ ಮರುಬಳಕೆ ಮಾಡಲಿದ್ದಾರೆ ಎಂದು ತಿಳಿಸಿದರು.

ಎನ್‌ಸಿಸಿ ಅಧಿಕಾರಿ ಕೆ.ಎನ್.ಮಂಜುನಾಥ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.