ADVERTISEMENT

‘ಗುರಿ ಸಾಧನೆಗೆ ಆತ್ಮವಿಶ್ವಾಸ ಮುಖ್ಯ’

ಜೆ.ಪಿ.ನಾರಾಯಣಸ್ವಾಮಿ ಸಮುದಾಯ ಭವನ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 13:37 IST
Last Updated 20 ಜೂನ್ 2019, 13:37 IST
ಜೆ.ಪಿ. ನಾರಾಯಣಸ್ವಾಮಿ ಪುತ್ಥಳಿಯನ್ನು ಎಂ.ತಿಮ್ಮೇಗೌಡ ಉದ್ಘಾಟಿಸಿದರು
ಜೆ.ಪಿ. ನಾರಾಯಣಸ್ವಾಮಿ ಪುತ್ಥಳಿಯನ್ನು ಎಂ.ತಿಮ್ಮೇಗೌಡ ಉದ್ಘಾಟಿಸಿದರು   

ಮಾಗಡಿ: ‘ದೇವರ ಆರಾಧನೆಯಿಂದ ಮುಕ್ತಿಯ ಜತೆಗೆ, ಹಂಚಿ ತಿನ್ನಲು ಸ್ಪೂರ್ತಿ ದೊರೆಯಲಿದೆ’ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಅಭಿಪ್ರಾಯ ಪಟ್ಟರು.

ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನದ ಆವರಣದಲ್ಲಿ, ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್ ಸಹಯೋಗದಲ್ಲಿ, ಗುರುವಾರ ನಡೆದ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಜೆ.ಪಿ.ನಾರಾಯಣಸ್ವಾಮಿ ಸಮುದಾಯ ಭವನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬ್ರಹ್ಮ ಶ್ರೀ ನಾರಾಯಣ ಗುರುಗಳ ಜೀವನದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಒಬ್ಬನೇ ದೇವರು, ಒಂದೇ ಕುಲ ಎಂದು ಅರಿತು ಶಾಂತಿ, ಸೌಹಾರ್ದಯುತ ಸಮ ಸಮಾಜ ಸಾಧ್ಯವಾಗಲಿದೆ. ರಾಜ್ಯದಲ್ಲಿ ತೀರಾ ಹಿಂದುಳಿದಿರುವ ಈಡಿಗರ ಸಮುದಾಯದವರು ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಬೇಕು. ಇತರೆ ಹಿಂದುಳಿದ ಸಮುದಾಯಗಳ ಜತೆ ಸೇರಿ ಆ ಮೂಲಕ ಸಂಘಟಿತರಾದಾಗ ಮಾತ್ರ ಸರ್ಕಾರಿ ಸವಲತ್ತು ಪಡೆಯಲು ಸಾಧ್ಯ. ಸೋಲೂರಿನಲ್ಲಿ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಬಳಿ ನಮ್ಮ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಜೆ.ಪಿ. ನಾರಾಯಣ ಸ್ವಾಮಿ ಅವರ ಕನಸು ಇಂದು ನನಸಾಗಿದೆ. ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಬಡವರ ಮದುವೆ ಇತರೆ ಕಾರ್ಯಕ್ರಮಗಳಿಗೆ ಅವಕಾಶ ದೊರೆಯಲಿದೆ’ ಎಂದು ತಿಳಿಸಿದರು.

ADVERTISEMENT

ಜೆ.ಪಿ.ನಾರಾಯಣಸ್ವಾಮಿ ಅಮೃತ ಶಿಲೆಯ ಪುತ್ಥಳಿ ಅನಾವರಣಗೊಳಿಸಿದ ಕೆಪಿಎಸ್ಸಿ ಸದಸ್ಯ ಡಾ. ಲಕ್ಷ್ಮೀನರಸಿಂಹಯ್ಯ ಮಾತನಾಡಿ ‘ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆತ್ಮವಿಶ್ವಾಸ ಅಳವಡಿಸಿಕೊಂಡರೆ ಗುರಿ ಸಾಧಿಸಬಹುದು ಎಂಬುದಕ್ಕೆ ಡಾ.ರಾಜ್ ಕುಮಾರ್ ಮತ್ತು ಜೆ.ಪಿ.ನಾರಾಯಣ ಸ್ವಾಮಿ ಮಾದರಿ. ದೇವರ ಮೇಲೆ ನಂಬಿಕೆ ಇಟ್ಟು ಜೀವನದ ಗುರಿ ಮುಟ್ಟಲು ಸತತವಾಗಿ ಶ್ರಮಿಸಬೇಕು’ ಎಂದರು.

ರಾಜ್ಯ ಈಡಿಗರ ಸಂಘದ ವ್ಯವಸ್ಥಾಪಕ ಧರ್ಮದರ್ಶಿ ಜೆ.ಪಿ.ಸುಧಾಕರ್, ಸಂಘಟನಾ ಕಾರ್ಯದರ್ಶಿ ಟಿ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಹನುಮಂತರಾಜ್, ಖಜಾಂಚಿ ಹರಿಚರಣ್, ಜಂಟಿ ಕಾರ್ಯದರ್ಶಿ ಜಿ.ಒ.ಕೃಷ್ಣಬಾಬು, ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ, ಉಪಾಧ್ಯಕ್ಷರಾದ ಶುಭಾ ಮಧುಸೂಧನ್, ಇಂದ್ರಮ್ಮ ವಿಶ್ವನಾಥ್, ಮೈಸೂರು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್, ರಾಜ್ಯ ಸಂಘದ ಉಪಾಧ್ಯಕ್ಷರಾದ ರವಿದಾಸಪ್ಪ, ಉದಯ್, ಮಧುಸೂಧನ್, ನಿರ್ದೇಶಕರಾದ ದುಷ್ಯಂತ್, ಹರ್ಷಕಣೇಕಲ್, ಮುರಳಿಧರ್, ಪ್ರಕಾಶ್.ಆರ್.ಪಿ, ಸೋಲೂರಿನ ವೆಂಕಟಾಚಲಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ.ಗೋಪಾಲ್ ಮಾತನಾಡಿದರು.

ಮುಖಂಡರಾದ ಟಿ.ಮುತ್ತುರಾಜ್, ಟಿ.ಅಂಜನ್‌ ಕುಮಾರ್, ಎಂ.ರಾಮು, ಹರೀಶ್, ಶ್ರೀನಿವಾಸಯ್ಯ, ಬಿ.ಎನ್.ಕೇಶವಮೂರ್ತಿ, ಸಂಪತ್, ಕುದೂರಿನ ವೆಂಕಟೇಶ್, ಮಾಗಡಿಯ ಮೋಹನ್ ಕುಮಾರ್, ಪುಟ್ಟಸ್ವಾಮಿ, ಮಂಜಣ್ಣ, ರಾಘವೇಂದ್ರ, ರಂಗಲಕ್ಷ್ಮಮ್ಮ, ರಜನಿ ವೆಂಕಟೇಶ್, ಭೂಮಿಕ, ಲತಾ ವೆಂಕಟೇಶ್, ಶಿಲ್ಪ ವೆಂಕಟೇಶ್, ರಾಜ್ಯ ಆರ್ಯ ಈಡಿಗರ ಮಹಿಳಾ ಸಂಘದ ಪದಾಧಿಕಾರಿಗಳಾದ ಲತಾ ಸುಧಾಕರ್, ನಿವೇದಿತಾ, ಚೇತನಾ ಚರಣ್, ಪ್ರೇಮಕಾಂತ, ಪರಿಮಳ ರಾಕೇಶ್, ಜೆ.ಪಿ.ತುಳಸಿ, ಜೆ.ಪಿ.ಸುಧಾ, ರೇಖಾ ಉಮೇಶ್, ಅಮಿತಾ ಆನಂದ್, ಪ್ರತಿಭಾ ಕೊಟ್ರೇಶ್, ಉಷಾ ಕೃಷ್ಣ, ಶೋಭಾ ನಾರಾಯಣ್, ನಾಗರತ್ನ ನಾಗರಾಜು, ರತ್ನಮ್ಮ, ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ, ನಿವೃತ್ತ ಅಧಿಕಾರಿ ಟಿ.ಎಸ್.ತಿಮ್ಮಪ್ಪ ಇದ್ದರು.

ಡಾ. ಲಕ್ಷ್ಮೀನರಸಿಂಹಯ್ಯ ಮಾಡಿಸಿ ಕೊಟ್ಟಿರುವ ಜೆ.ಪಿ.ನಾರಾಯಣಸ್ವಾಮಿ ಪುತ್ಥಳಿ ಅನಾವರಣಗೊಳಿಸಲಾಯಿತು. ಡಾ.ಎಂ.ತಿಮ್ಮೇಗೌಡ ನಿರ್ಮಿಸಿರುವ ಗಣಪತಿ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ ನಡೆಯಿತು. ಸತ್ಯನಾರಾಯಣಸ್ವಾಮಿ ಪೂಜೆ, ಹೋಮ ನಡೆದವು. ಈಡಿಗ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಸಾಮೂಹಿಕ ಭೋಜನ ನಡೆಯಿತು. ರೇಣುಕಾಯಲ್ಲಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಆರ್‌.ಎಲ್‌ ಜಾಲಪ್ಪ ಅಕಾಡೆಮಿ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.