ADVERTISEMENT

‘ಅಂಗವಿಕಲರಿಗೂ ನಮ್ಮಂತೆ ಬದುಕುವ ಹಕ್ಕಿದೆ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 12:53 IST
Last Updated 16 ಜನವರಿ 2019, 12:53 IST
ಕನಕಪುರ ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ಎಂ.ಪುರುಷೋತ್ತಮ್‌ ಬಟ್ಟೆ ವಿತರಿಸಿದರು
ಕನಕಪುರ ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ಎಂ.ಪುರುಷೋತ್ತಮ್‌ ಬಟ್ಟೆ ವಿತರಿಸಿದರು   

ಕನಕಪುರ: ’ದೇಹದ ಬೆಳವಣಿಗೆಯಲ್ಲಿನ ನ್ಯೂನತೆಯಿಂದ ಕೆಲವು ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ. ಇಂತಹ ಮಕ್ಕಳ ಬಗ್ಗೆ ಪೋಷಕರು ವಿಶೇಷ ಕಾಳಜಿ ವಹಿಸಬೇಕಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್‌ ಹೇಳಿದರು.

ಜಕ್ಕಸಂದ್ರ ಬಳಿಯ ರಮಣ ಮಹರ್ಷಿ ಅಂಧರ ಶಾಲೆಯಲ್ಲಿ ಅಂಗವಿಕಲರಿಗೆ ಹಬ್ಬದ ಪ್ರಯುಕ್ತವಾಗಿ ಬಟ್ಟೆ ವಿತರಿಸಿ ಅವರು ಮಾತನಾಡಿದರು.

‘ಅಂಗವಿಕಲ ಮಕ್ಕಳಲ್ಲೂ ವಿಶೇಷವಾದ ಪ್ರತಿಭಾನ್ವಿತೆ ಇದೆ.ಅವರಿಗೂ ಸೂಕ್ತ ಅವಕಾಶ ನೀಡಿ ಪ್ರೋತ್ಸಾಯಿಸಿದಾಗ ಮಾತ್ರ ಉತ್ತಮ ಸಾಧನೆ ಮಾಡುತ್ತಾರೆ. ರಮಣ ಮಹರ್ಷಿ ಆಶ್ರಮದಲ್ಲಿರುವ ಮಕ್ಕಳು ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ’ ಎಂದರು.

ADVERTISEMENT

’ಎಲ್ಲ ರೀತಿ ಚೆನ್ನಾಗಿರುವ ನಾವು ಇಂತಹ ಮಕ್ಕಳೊಂದಿಗೆ ಬೆರೆತು ಹಬ್ಬ ಆಚರಣೆ ಮಾಡಿದಾಗ ಅವರಿಗೂ ಸಂತೋಷವಾಗುತ್ತದೆ’ ಎಂದರು.

ಸವಿತಾ ಪುರುಷೋತ್ತಮ್, ಯುವ ಕಾಂಗ್ರೆಸ್ ಮುಖಂಡರಾದ ಟಿ.ಕೆ. ವಿಶ್ವಕಾಂತ್, ಕುಮಾರ್, ನರಸಿಂಹಮೂರ್ತಿ, ಅನಿಲ್, ಚಿಕ್ಕಮರಿ, ಆನಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.