ADVERTISEMENT

ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಬೆಳ್ಳಿಬಟ್ಟಲು ಹಂಚಿಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 13:39 IST
Last Updated 12 ಜೂನ್ 2019, 13:39 IST

ಮಾಗಡಿ: ‘ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ, ಅಭ್ಯರ್ಥಿಗಳು ಮತದಾರರಿಗೆ ಬೆಳ್ಳಿ ಬಟ್ಟಲು ಹಂಚಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರು ಆರೋಪಿಸಿದ್ದಾರೆ.

‘ಸರ್ಕಾರಿ ನೌಕರರು ಮತದಾನದ ಪಾವಿತ್ರ್ಯವನ್ನು ಗಾಳಿಗೆ ತೂರಿದ್ದು, ಮತ ಕೊಳ್ಳಲು ಹೊರಟಿದ್ದಾರೆ. ಬೆಳ್ಳಿ ಬಟ್ಟಲುಗಳನ್ನು ಸ್ವೀಕರಿಸಲು ಕೆಲವು ಶಿಕ್ಷಕರು ಹಿಂಜರಿದಿದ್ದು, ಸಂಘದ ಹಾಲಿ ಪದಾಧಿಕಾರಿಗಳು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾರ್ವಜನಿಕ ಚುನಾವಣೆಯಲ್ಲಿ ನಡೆಯುವ ಎಲ್ಲ ಕಸರತ್ತುಗಳನ್ನು ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಸಾರ್ವಜನಿಕರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಸರ್ಕಾರಿ ನೌಕರರು, ಮತದಾನದ ಪಾವಿತ್ರ್ಯವನ್ನು ಗಾಳಿಗೆ ತೂರಿರುವುದು ನಾಚಿಕೆಗೇಡಿನ ಸಂಗತಿ. ಮದ್ಯ ಮತ್ತು ಮಾಂಸದ ಪಾರ್ಟಿಗಳು ಹೆಚ್ಚು ನಡೆಯುತ್ತಿವೆ’ ಎಂದು ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.