ADVERTISEMENT

ಹಾಲಿಗೆ ನೀರು ಬೆರೆಸಬೇಡಿ: ವೈದ್ಯಾಧಿಕಾರಿ ಡಾ.ನವೀನ್‌

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 13:37 IST
Last Updated 16 ಸೆಪ್ಟೆಂಬರ್ 2019, 13:37 IST
ಮಾಗಡಿ ತಾಲ್ಲೂಕಿನ ಕುದೂರು ಡೇರಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಮಾಗಡಿ ತಾಲ್ಲೂಕಿನ ಕುದೂರು ಡೇರಿಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಕುದೂರು (ಮಾಗಡಿ): ‘ಹಾಲಿಗೆ ನೀರು ಬೆರೆಸಬೇಡಿ. ಎಲ್ಲ ಹಾಲನ್ನು ಡೇರಿಗೆ ಹಾಕುವ ಬದಲು ಮನೆ ಮಕ್ಕಳೆಲ್ಲರೂ ಹಾಲು ಕುಡಿಯುವುದನ್ನು ರೂಢಿಸಿಕೊಳ್ಳಬೇಕು’ ಎಂದು ವೈದ್ಯಾಧಿಕಾರಿ ಡಾ.ನವೀನ್‌ ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ಹಸುಗಳಿಗೆ ಉತ್ತಮ ಹುಲ್ಲು ಕೊಡಬೇಕು. ಕಾಲಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸಬೇಕು’ ಎಂದು ಸಲಹೆ ನೀಡಿದರು.

ಮುಖಂಡ ಕೆ.ಎಸ್‌.ಪ್ರಭಾಕರ್‌ ಮಾತನಾಡಿ, ಹಸುಗಳಿಗೆ ಹಾಲಿನ ಉತ್ಪಾದನೆಯಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳ ಆಹಾರ ನೀಡಬೇಕು. ಹಸುವಿನ ಹಾಲು ಕರೆಯುವಾಗ ಕೆಚ್ಚಲಿನ ಸುತ್ತಲಿನ ಭಾಗವನ್ನು ಸ್ವಚ್ಛಗೊಳಿಸಬೇಕು. ಹಾಲು ಕರೆಯುವಾಗ 15 ರಿಂದ 18 ನಿಮಿಷದೊಳಗಾಗಿ ಹಾಲು ಕರೆಯಬೇಕು’ ಎಂದು ಹೇಳಿದರು.

ADVERTISEMENT

ಮುಖಂಡರಾದ ಎಚ್‌.ವಿ.ವಿಮಲ ಕುಮಾರ್‌, ಚಿಕ್ಕಗಂಗಣ್ಣ, ರಾಮಚಂದ್ರಪ್ಪ, ಕೆ.ಆರ್.ಯತಿರಾಜು ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಕೆ.ಪಿ. ಭರತೀಶ್ ಸದಸ್ಯರಾದ ಲೋಕೇಶ್, ನಾಗೇಶ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.