ADVERTISEMENT

ಭತ್ತದ ಗದ್ದೆ ನಾಶ ಮಾಡಿದ ಆನೆಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 4:59 IST
Last Updated 21 ಸೆಪ್ಟೆಂಬರ್ 2021, 4:59 IST
ಭತ್ತದ ಗದ್ದೆಯಲ್ಲಿ ಕಂಡ ಆನೆ ಹೆಜ್ಜೆಗಳು
ಭತ್ತದ ಗದ್ದೆಯಲ್ಲಿ ಕಂಡ ಆನೆ ಹೆಜ್ಜೆಗಳು   

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯ ಅವ್ವೇರಹಳ್ಳಿಯ ಭತ್ತದ ಗದ್ದೆಯನ್ನು ಆನೆಗಳ ಹಿಂಡು ಹಾನಿ ಮಾಡಿದೆ.

ಗ್ರಾಮದ ಸರ್ವೆ ಸಂಖ್ಯೆ 218ರಲ್ಲಿ ಇರುವ ರೇಣುಕಯ್ಯ ಎಂಬುವರಿಗೆ ಸೇರಿದ ಭತ್ತದ ಗದ್ದೆಗೆ ಸೋಮವಾರ ನಸುಕಿನಲ್ಲಿ ದಾಳಿ ನಡೆಸಿದ ಆನೆಗಳು ಇಡೀ ಜಮೀನಿನಲ್ಲಿ ಓಡಾಡಿ ಬೆಳೆಯನ್ನು ನಾಶ ಮಾಡಿವೆ.

ಕೆಲವು ದಿನದ ಹಿಂದಷ್ಟೇ ಪೈರು ನಾಟಿ ಮಾಡಿದ್ದು, ಆನೆಗಳಿಂದಾಗಿ ಫಸಲು ಹಾಳಾಗಿದೆ. ಈ ಭಾಗದಲ್ಲಿ ಆನೆ ದಾಳಿ ನಿರಂತರವಾಗಿದ್ದು, ಅವುಗಳನ್ನು ಕಾಡಿಗೆ ಓಡಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಸ್ಥಳೀಯ ರೈತರು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.