ADVERTISEMENT

ವಿದ್ಯಾರ್ಥಿಗಳಿಂದ ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:31 IST
Last Updated 10 ಫೆಬ್ರುವರಿ 2020, 14:31 IST
ರೂರಲ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾಡಿದ್ದ ವಸ್ತುಪ್ರದರ್ಶನವನ್ನು ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ವೀಕ್ಷಣೆ ಮಾಡಿದರು
ರೂರಲ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮಾಡಿದ್ದ ವಸ್ತುಪ್ರದರ್ಶನವನ್ನು ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ವೀಕ್ಷಣೆ ಮಾಡಿದರು   

ಕನಕಪುರ: ಇಲ್ಲಿನ ರೂರಲ್‌ ಕಾಲೇಜಿನಲ್ಲಿ ಕ್ರಿಯಾತ್ಮಕ ಚಟುವಟಿಕೆ‌ ವಸ್ತುಪ್ರದರ್ಶನ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು 13ರೀತಿಯ ವಿವಿಧ ಚಟುವಟಿಕೆಗಳ ವಸ್ತುಪ್ರದರ್ಶನ ನಡೆಸಿದರು.

ರೂರಲ್ ‌ಪದವಿ ಕಾಲೇಜಿನ ವಾಣಿಜ್ಯ ಮತ್ತು ಆಡಳಿತ ವಿಭಾಗದ ವತಿಯಿಂದ ವ್ಯವಹಾರಿಕ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿಭಾಗದ ಮುಖ್ಯಸ್ಥ ತಮ್ಮಣ್ಣಗೌಡ ವಸ್ತುಪ್ರದರ್ಶನ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಗೋವಿಂದಪ್ಪ ವ್ಯವಹಾರಿಕ ವಸ್ತು ಪ್ರದರ್ಶನದ ಪರಿಕಲ್ಪನೆ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್‌ಇಎಸ್‌ ಅಧ್ಯಕ್ಷ ಕೆ.ಬಿ.ನಾಗರಾಜು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ADVERTISEMENT

ಸಾರ್ವಜನಿಕವಾಗಿ ವಸ್ತುಪ್ರದರ್ಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ತಾವು ಮಾಡಿದ ಕ್ರಿಯಾತ್ಮಕ ಚುಟುವಟಿಕೆ ಬಗ್ಗೆ ವೀಕ್ಷಕರಿಗೆ ತಿಳಿಸಿಕೊಟ್ಟರು.

ಆರ್‌ಇಎಸ್‌ ಕಾರ್ಯದರ್ಶಿ ಸಿ.ರಮೇ‌ಶ್‌, ಉಪಾಧ್ಯಕ್ಷ ಎಂ.ಎಲ್‌.ಶಿವಕುಮಾರ್‌, ಕಾಲೇಜಿನ ಉಪ ಪ್ರಾಂಶುಪಾಲ ನಂಜುಂಡಯ್ಯ ಇದ್ದರು.

ಹಾರೋಹಳ್ಳಿ ಕಾಲೇಜಿನ ಡಾ.ಎಸ್‌.ನಾಗಭೂಷಣ್‌, ತಿಮ್ಮಯ್ಯ, ಕೋಡಿಹಳ್ಳಿ ಕಾಲೇಜಿನ ಅಶ್ವತ್ಥ್‌ನಾರಾಯಣ್‌ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.