ADVERTISEMENT

ಮಾಗಡಿಯಲ್ಲಿ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 13:49 IST
Last Updated 7 ಏಪ್ರಿಲ್ 2019, 13:49 IST

ಮಾಗಡಿ: ತಾಲ್ಲೂಕಿನಾದ್ಯಂತ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮುಂಜಾನೆ ಮನೆಯ ಮುಂದೆ ಬಣ್ಣದ ರಂಗೋಲಿ ಬಿಡಿಸಲಾಗಿತ್ತು. ತಳಿರು ತೋರಣ ಕಟ್ಟಿ, ಮನೆದೇವರನ್ನು ಪೂಜಿಸಿ, ಬೇವುಬೆಲ್ಲದ ಸಿಹಿಯನ್ನು ಸವಿದರು. ಹೊಸಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಸಂಜೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ತಿರುವೆಂಗಳನಾಥ ರಂಗನಾಥ ಸ್ವಾಮಿ, ಸೋಮೇಶ್ವರಸ್ವಾಮಿ, ಸಾವನದುರ್ಗ, ಶ್ರೀಪತಿಹಳ್ಳಿದೇವರಹಟ್ಟಿ, ನೇರಿಳೆಕೆರೆ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಶ್ರೀಗಿರಿಪುರದ ವೆಂಕಟರಮಣಸ್ವಾಮಿ, ಆಂಜನೇಯಸ್ವಾಮಿ ಗೊಲ್ಲರ ಹಟ್ಟಿ ಚಿತ್ರಲಿಂಗೇಶ್ವರಸ್ವಾಮಿ ಇತರೆಡೆಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ, ಬೇವು ಬೆಲ್ಲ ವಿತರಿಸಲಾಯಿತು.

ADVERTISEMENT

ಮಾರುಕಟ್ಟೆಯಲ್ಲಿ ಹೂವು ಹಣ್ಣು, ತರಕಾರಿ, ಬೇಳೆ, ಬೆಲ್ಲದ ಬೆಲೆಗಳು ಏಕಾಏಕಿ ಏರಿಕೆಯಾಗುತ್ತದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಬೋರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.