ADVERTISEMENT

ಆರ್ಥಿಕ, ಡಿಜಿಟಲ್ ಸಾಕ್ಷರತಾ ಅರಿವು

ಕೃಷಿಕರಿಗೆ ಸಾಲ ಸೌಲಭ್ಯದ ಮಾಹಿತಿ ಹಂಚಿಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 4:08 IST
Last Updated 13 ಆಗಸ್ಟ್ 2022, 4:08 IST
ಕನಕಪುರ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತಾ ಜಾಗೃತಿ ಶಿಬಿರ ನಡೆಯಿತು
ಕನಕಪುರ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತಾ ಜಾಗೃತಿ ಶಿಬಿರ ನಡೆಯಿತು   

ಕನಕಪುರ:ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿಯಲ್ಲಿ ಕೆನರಾ ಬ್ಯಾಂಕ್‌, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ವತಿಯಿಂದ ಶನಿವಾರ ಆರ್ಥಿಕ ಮತ್ತು ಡಿಜಿಟಲ್‌ ಸಾಕ್ಷರತಾ ಜಾಗೃತಿ ಶಿಬಿರ ನಡೆಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಮಹೇಶ್ ಗೌಡ ಸಿ.ಬಿ., ‘ಬ್ಯಾಂಕ್‌ನಿಂದ ಕೃಷಿ ಸಾಲ ನೀಡಲಾಗುತ್ತಿದೆ. ಹಳೆಯ ಕೃಷಿ ಸುಸ್ಥಿ ಸಾಲಗಳಿಗೆ ವಿಶೇಷ ರಿಯಾಯಿತಿಯೊಂದಿಗೆ ಸಾಲ ತೀರುವಳಿಗೆ ಅವಕಾಶ ನೀಡಲಾಗಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು
ಹೇಳಿದರು.

ಬ್ಯಾಂಕಿನಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸರ್ಕಾರ ಹಲವು ಕಾರ್ಯಕ್ರಮ ರೂಪಿಸಿದೆ. ಜನ ಸ್ನೇಹಿ ಕಾರ್ಯಕ್ರಮಗಳಾದ ಪ್ರಧಾನ ಮಂತ್ರಿ ಜನ ಧನ್‌ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬೀಮಾ, ಜೀವನ ಜ್ಯೋತಿ, ಫಸಲ್ ಬೀಮಾ, ಅಟಲ್ ಪಿಂಚಣಿ, ಸುಕನ್ಯಾ ಸಮೃದ್ಧಿ ಯೋಜನೆಗಳಿವೆ ಎಂದರು.

ADVERTISEMENT

ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿ ಯೋಜನೆಗಳ ಬಗ್ಗೆ ವಿವರಿಸಿದರು. ಸ್ತ್ರೀಶಕ್ತಿ ಸಂಘಗಳಿಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೆನರಾ ಬ್ಯಾಂಕ್‌ನ ಕೃಷಿ ವಿಸ್ತರಣಾ ಅಧಿಕಾರಿ ಚೆಲುವರಾಜ್ ಎಲ್‌.ಎನ್‌. ಮಾತನಾಡಿ, ಕಾರ್ಯಕ್ರಮದಲ್ಲಿ ಹಣಕಾಸು ಸಾಕ್ಷರತೆ ಕುರಿತು ಗ್ರಾಮೀಣ ಜನರಿಗೆ ಕೃಷಿ ಆದಾಯ, ಖರ್ಚುಗಳ ನಿರ್ವಹಣೆ, ಜೀವನದ ಅಗತ್ಯತೆಗಳಿಗೆ ಹಣದ ಉಳಿತಾಯ ಮತ್ತು ಅನಾವಶ್ಯಕ ಖರ್ಚುಗಳಿಗೆ ಸಾಲ ಮಾಡುವುದರಿಂದ ಆಗುವ ಸಮಸ್ಯೆಗಳ ಬಗ್ಗೆ
ತಿಳಿಸಿದರು.

ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಗಾರಯ್ಯ, ಕನಕಾಂಬರಿ ಮಹಿಳಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ, ಗ್ರಾಮೀಣ ಮಹಿಳೆಯರು, ಸ್ತ್ರೀಶಕ್ತಿ ಸಂಘದ ಸದಸ್ಯೆಯರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.