ADVERTISEMENT

ಕನಕಪುರ ಅಮರನಾರಾಯಣ ಬ್ಲಾಕ್‌ನಲ್ಲಿ ಅನಿಲ ಸೋರಿಕೆ: ಮೂವರಿಗೆ ಸುಟ್ಟ ಗಾಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 2:59 IST
Last Updated 27 ಜನವರಿ 2026, 2:59 IST
ಕನಕಪುರ ಅಮರನಾರಾಯಣ ಬ್ಲಾಕ್ ನಲ್ಲಿ ಸಿಲಿಂಡರ್ ಪೈಪ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತುಕೊಂಡಿರುವುದು 
ಕನಕಪುರ ಅಮರನಾರಾಯಣ ಬ್ಲಾಕ್ ನಲ್ಲಿ ಸಿಲಿಂಡರ್ ಪೈಪ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತುಕೊಂಡಿರುವುದು    

ಕನಕಪುರ: ಅಡುಗೆ ಸಿಲಿಂಡರ್ ಪೈಪ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು, ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಕನಕಪುರ ಅಮರನಾರಾಯಣ ಬ್ಲಾಕ್‌ನಲ್ಲಿ ಸೋಮವಾರ ಈ ಘಟನೆ ನಡೆದಿದೆ. 

ಪ್ರಶಾಂತ್ (22), ಅವರ ತಾಯಿ ಸವಿತಾ (45) ಮತ್ತು ತಂದೆ ಸಿದ್ದರಾಜು (50) ಗಾಯಗೊಂಡವರು. ಪ್ರಶಾಂತ್ ಸ್ಥಿತಿ ಗಂಭೀರವಾಗಿದೆ.

ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ-ಬೋಂಡ ಮತ್ತು ಕಾರ ಮಿಕ್ಸರ್ ಮಾರುವ ಹೋಟೆಲ್ ನಡೆಸುತ್ತಿದ್ದ ಪ್ರಶಾಂತ್, ಸೋಮವಾರ ಮನೆಯಲ್ಲೇ ಕಾರ ಮಿಕ್ಸರ್ ತಯಾರಿಸುತ್ತಿದ್ದಾಗ ಸಿಲಿಂಡರ್‌ ಪೈಪ್‌ನಿಂದ ಗ್ಯಾಸ್ ಸೋರಿಕೆಯಾಗಿದೆ.

ADVERTISEMENT

ಬೆಂಕಿ ಹೆಚ್ಚಾಗುತ್ತಿರುವುದನ್ನು ಕಂಡ ಪ್ರಶಾಂತ್, ಸಿಲಿಂಡರ್ ಹೊತ್ತಿಕೊಂಡು ಮನೆಗೆ ಬೆಂಕಿ ಹತ್ತಬಹುದೆಂದು ಭಯಪಟ್ಟು ಅದನ್ನು ನಂದಿಸಲು ನೀರಿನ ತೊಟ್ಟಿಯಲ್ಲಿ ಹಾಕಲು ಪ್ರಯತ್ನಿಸಿದರು. ಆ ಸಮಯದಲ್ಲಿ ಅವರಿಗೆ ತೀವ್ರವಾಗಿ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳಾದವು.

ಮೂವರು ಗಾಯಾಳುಗಳಿಗೆ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಕನಕಪುರ: ಮನೆಯಲ್ಲಿ ಹೋಟೆಲ್ ನ ತಿಂಡಿ ತಯಾರಿಸುವಾಗ ಸಿಲಿಂಡರ್ ಪೈಪಿನಲ್ಲಿ ಗ್ಯಾಸ್ ಲೀಕೇಜ್ ಹಾಗಿ ಹೊತ್ತಿಕೊಂಡು ಬೆಂಕಿಯಿಂದ ಒಂದೆ ಕುಟುಂಬದ ಮೂವರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಕನಕಪುರ ನಗರದ ಅಮರ ನಾರಾಯಣ ಬ್ಲಾಕ್ ನಲ್ಲಿ ಸೋಮವಾರ ನಡೆದಿದೆ.

ನಗರದ ರಾಮನಗರ ರಸ್ತೆಯಲ್ಲಿ ಬರುವ ಅಮರನಾರಾಯಣ ಬ್ಲಾಕ್ ನ ನಿವಾಸಿ ಪ್ರಶಾಂತ್ (22), ಅವರ ತಾಯಿ ಸವಿತ(45), ತಂದೆ ಸಿದ್ದರಾಜು (50) ಘಟನೆಯಲ್ಲಿ ಗಾಯಗೊಂಡವರಾಗಿದ್ದು, ಅದರಲ್ಲಿ ಪ್ರಶಾಂತ್ ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.

ರಾಮನಗರ ರಸ್ತೆಯ ಗ್ಯಾರೇಜ್ ಮುಂಭಾಗದಲ್ಲಿ ತಳ್ಳುಗಾಡಿ ಇಟ್ಟುಕೊಂಡು ಬಜ್ಜಿ ಬೋಂಡದ ಕಾರ ಮಿಕ್ಸರ್ ಹೋಟೆಲ್ ವ್ಯಾಪಾರ ಮಾಡುವ ಪ್ರಶಾಂತ್ ಸೋಮವಾರ ಮನೆಯಲ್ಲಿ ಕಾರ ಮಿಕ್ಸರ್ ತಯಾರಿ ಮಾಡುತ್ತಿದ್ದಾಗ ಸಿಲಿಂಡರ್ ನ ಪೈಪ್ ನಲ್ಲಿ ಗ್ಯಾಸ್ ಲೀಕೇಜ್ ಆಗಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ತಗಲಿ ಸುಟ್ಟ ಗಾಯಗಳಾದಾಗ ಭಯಗೊಂಡ ಪ್ರಶಾಂತ್ ಮತ್ತು ಅವರ ತಂದೆ, ತಾಯಿ ಗ್ಯಾಸ್ ಸ್ಟವ್ ಸಿಲಿಂಡರ್ ಅಲ್ಲೇ ಬಿಟ್ಟು ಮನೆಯ ಒಳಗೆ ಓಡಿದ್ದಾರೆ.

ಸಿಲಿಂಡರ್ ನಿಂದ ಹೊತ್ತಿಕೊಂಡಿದ್ದ ಬೆಂಕಿಯು ಜಾಸ್ತಿ ಆಗುತ್ತಿದ್ದಂತೆ ಮನೆಯು ಹತ್ತಿ ಕೊಳ್ಳುತ್ತದೆ ಎಂಬ ಭಯದಲ್ಲಿ ಸಿಲಿಂಡರನ್ನು ನೀರಿನ ತೊಟ್ಟಿಯಲ್ಲಿ ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದಾಗ ಪ್ರಶಾಂತ್ ಗೆ ಹೆಚ್ಚಿನ ಬೆಂಕಿ ತಗುಲಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದಾರೆ.

ಮನೆಯ ಅಕ್ಕಪಕ್ಕದವರು ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿದ್ದಾರೆ, ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಮೂವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿದ ಗ್ಯಾಸ್ ಏಜೆನ್ಸಿ ಅವರು ಕಠಿಣ ಸ್ಥಳಕ್ಕೆ ಭೇಟಿ ನೀಡಿ ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದನ್ನು ಪರಿಶೀಲಿಸಿ ಮನೆಯ ಒಳಗಡೆ ಇದ್ದಂತಹ ಗ್ಯಾಸ್ ತುಂಬಿದ್ದ ಮತ್ತೊಂದು ಸಿಲಿಂಡರನ್ನು ಹೊರಗಡೆ ತೆಗೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.