ADVERTISEMENT

ಬ್ಯಾಸ್ಕೆಟ್‌ ಬಾಲ್‌ನಲ್ಲಿ ಚಿನ್ನದ ಪದಕ ಗಳಿಸಿದ ಶಿಕ್ಷಕಿ ಎಸ್‌.ಎನ್‌.ರೇಷ್ಮಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:37 IST
Last Updated 10 ಫೆಬ್ರುವರಿ 2020, 14:37 IST
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಶಿಕ್ಷಕಿ ಎಸ್‌.ಎನ್‌.ರೇಷ್ಮಾ
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಶಿಕ್ಷಕಿ ಎಸ್‌.ಎನ್‌.ರೇಷ್ಮಾ   

ಕನಕಪುರ: ಇಲ್ಲಿನ ಜಕ್ಕಸಂದ್ರ ಜೈನ್‌ ಕಾಲೇಜಿನ ಇಂಗ್ಲಿಷ್ ಶಿಕ್ಷಕಿ ಎಸ್‌.ಎನ್‌.ರೇಷ್ಮಾ 3ನೇ ರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟ ಬ್ಯಾಸ್ಕೆಟ್‌ ಬಾಲ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಫೆ.5ರಿಂದ 9ರವರೆಗೆ ನಡೆದ ಕ್ರೀಡಾಕೂಟದಲ್ಲಿ 40ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅವರು ರಾಜ್ಯವನ್ನು ಪ್ರತಿನಿಧಿಸಿದ್ದರು.

ಸೆಮಿಫೈನಲ್‌ನಲ್ಲಿ ಗುರುರಾತ್‌ ವಿರುದ್ಧ ಆಟವಾಡಿ ಫೈನಲ್‌ನಲ್ಲಿ ಕೇರಳ ತಂಡದ ವಿರುದ್ಧ ಸೆಣಸಾಡಿ ರೋಚಕ ಜಯಗಳಿಸಿದ್ದಾರೆ. 2020ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಫ್ಯಾನ್‌ ಫೆಸಿಪಿಕ್‌ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಗೆದ್ದು ದೇಶಕ್ಕೆ ಕೀರ್ತಿ ತರಲಿ ಎಂದು ಜೈನ್‌ ವಿದ್ಯಾನಿಕೇತನ, ಜೈನ್‌ ವಿದ್ಯಾಸಂಸ್ಥೆ ಶುಭ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT