ADVERTISEMENT

ಪೌಷ್ಟಿಕ ಆಹಾರದಿಂದ ಆರೋಗ್ಯ ವೃದ್ಧಿ

ವಿಶ್ವ ಆಹಾರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:51 IST
Last Updated 17 ಅಕ್ಟೋಬರ್ 2021, 4:51 IST
ಮಾಗಡಿ ತಾಲ್ಲೂಕಿನ ಕಲ್ಯದಲ್ಲಿ ಕೆವಿಕೆಯಿಂದ ನಡೆದ ವಿಶ್ವ ಆಹಾರ ದಿನಾಚರಣೆಯಲ್ಲಿ ಪೌಷ್ಟಿಕ ಆಹಾರ ತಯಾರಿಸಿದ ನಿರ್ಮಲಾ, ವಿದ್ಯಾ, ಅನುಸೂಯ ಅವರಿಗೆ ವಿಜ್ಞಾನಿ ಡಾ.ಲತಾ ಆರ್‌. ಕುಲಕರ್ಣೀ ಬಹುಮಾನ ವಿತರಿಸಿದರು. ವಿಜ್ಞಾನಿ ಡಾ.ಸೌಜನ್ಯ ಇದ್ದರು
ಮಾಗಡಿ ತಾಲ್ಲೂಕಿನ ಕಲ್ಯದಲ್ಲಿ ಕೆವಿಕೆಯಿಂದ ನಡೆದ ವಿಶ್ವ ಆಹಾರ ದಿನಾಚರಣೆಯಲ್ಲಿ ಪೌಷ್ಟಿಕ ಆಹಾರ ತಯಾರಿಸಿದ ನಿರ್ಮಲಾ, ವಿದ್ಯಾ, ಅನುಸೂಯ ಅವರಿಗೆ ವಿಜ್ಞಾನಿ ಡಾ.ಲತಾ ಆರ್‌. ಕುಲಕರ್ಣೀ ಬಹುಮಾನ ವಿತರಿಸಿದರು. ವಿಜ್ಞಾನಿ ಡಾ.ಸೌಜನ್ಯ ಇದ್ದರು   

ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಕಲ್ಯಾ ಗ್ರಾಮದಲ್ಲಿ ಶನಿವಾರ ವಿಶ್ವ ಆಹಾರ ದಿನ ಆಚರಿಸಲಾಯಿತು.

ವಿಜ್ಞಾನಿ ಡಾ.ಸೌಜನ್ಯ ಎಸ್. ಮಾತನಾಡಿ, ವಿಶ್ವಸಂಸ್ಥೆಯು ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ಗೌರವಾರ್ಥವಾಗಿ ಈ ದಿನದಂದು ವಿಶ್ವದಾದ್ಯಂತ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ವಿಶ್ವ ಆಹಾರ ದಿನಾಚರಣೆಯು ಮುಖ್ಯವಾಗಿ ಜಾಗತಿಕ ಹಸಿವು ನಿಭಾಯಿಸಲು ಮೀಸಲಾದ ದಿನವಾಗಿದೆ. ಅಂದು ಪ್ರಪಂಚದಾದ್ಯಂತ ಜನರು ಹಸಿವು ನಿರ್ಮೂಲನೆ ಮಾಡಿ ತಮ್ಮ ಬದ್ಧತೆ ಘೋಷಿಸಲು ಒಟ್ಟಾಗಿ ಸೇರಿಕೊಳ್ಳುತ್ತಾರೆ. ವಿಶ್ವದಾದ್ಯಂತ ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶದ ಆಹಾರ ಖಚಿತಪಡಿಸಿಕೊಳ್ಳಲು ಅವಶ್ಯಕವಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಂತಾ ಮಾತನಾಡಿದರು. ಬಾಪೌಷ್ಟಿಕ ಆಹಾರ ತಯಾರಿಕೆ ಕುರಿತ ಆಹಾರ ಸ್ಪರ್ಧೆ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ನಿರ್ಮಲಾ, ವಿದ್ಯಾ ಮತ್ತು ಅನಸೂಯ ಬಹುಮಾನ ನೀಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.