ADVERTISEMENT

ನೀರು ಚರಂಡಿ ಪಾಲು : ಪೈಪ್‌ ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:28 IST
Last Updated 21 ಸೆಪ್ಟೆಂಬರ್ 2019, 13:28 IST
ಮಾಗಡಿ ತಾಲ್ಲೂಕು ಪಂಚಾಯಿತಿ ವಸತಿ ಗೃಹಗಳ ಎದುರು ನೀರು ಪೋಲಾಗಿ ಚರಂಡಿ ಸೇರುತ್ತಿದೆ
ಮಾಗಡಿ ತಾಲ್ಲೂಕು ಪಂಚಾಯಿತಿ ವಸತಿ ಗೃಹಗಳ ಎದುರು ನೀರು ಪೋಲಾಗಿ ಚರಂಡಿ ಸೇರುತ್ತಿದೆ   

ಮಾಗಡಿ: ಪುರಸಭೆ ವ್ಯಾಪ್ತಿ ಗುಡೇಮಾರನಹಳ್ಳಿ ರಸ್ತೆಯ ತಾಲ್ಲೂಕು ಪಂಚಾಯಿತಿ ವಸತಿ ಗೃಹಗಳ ಎದುರು ಮಂಚನಬೆಲೆ ಮುಖ್ಯ ಪೈಪ್‌ ಒಡೆದು ನೀರು ಚರಂಡಿ ಪಾಲಾಗುತ್ತಿದೆ’ ಎಂದು ನಿವೃತ್ತ ನೌಕರ ನಾಗರಾಜಯ್ಯ ತಿಳಿಸಿದರು.

‘ಮಂಚನಬೆಲೆ ಜಲಾಶಯದಿಂದ 60 ಅಡಿ ಮೇಲಕ್ಕೆ ನೀರನ್ನು ಲಿಫ್ಟ್‌ ಮಾಡಿ, ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಅಂದಿನ ಸಚಿವ ಎಚ್‌.ಎಂ ರೇವಣ್ಣ ಅವರ ದೂರದೃಷ್ಟಿಯ ಫಲವಾಗಿ ಪಟ್ಟಣದ ಜನತೆ ಶುದ್ಧ ನೀರು ಕುಡಿಯುವಂತಾಗಿದೆ. ಆದರೆ ಪುರಸಭೆ ಅಧಿಕಾರಿಗಳ ಪೈಕಿ ಯಾರೊಬ್ಬರೂ ಇಲ್ಲಿ ವಾಸವಾಗಿಲ್ಲ. ಬೆಳಿಗ್ಗೆ ಬಂದು, ಸಂಜೆ ಹೊರಟುಬಿಡುತ್ತಾರೆ. ನೀರು ವ್ಯರ್ಥವಾಗಿ ಚರಂಡಿ ಪಾಲಾದರೂ ಅಧಿಕಾರಿಗಳು ಗಮನಿಸಿಲ್ಲ. ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಹೊಸಪೇಟೆ ರಸ್ತೆ ನಿವಾಸಿ ನರಸಿಂಹಯ್ಯ ಮಾತನಾಡಿ, ‘ನೀರು ಪೋಲಾಗುವುದನ್ನು ತಡೆಯಲು ಪುರಸಭೆ ಆಡಳಿತಾಧಿಕಾರಿಗಳು ಮುಂದಾಗಬೇಕು. ಕೆಲ ಬಡಾವಣೆಗಳಲ್ಲಿ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದಾರೆ. ಕೆಲವೆಡೆ ನೀರು ವ್ಯರ್ಥವಾಗಿ ಹರಿದು ಚರಂಡಿ ಸೇರಿ ಸೇರುತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.