ADVERTISEMENT

‘ಏಕತೆ ಜನಪದದ ಮೂಲ ಆಶಯ’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 13:15 IST
Last Updated 4 ಆಗಸ್ಟ್ 2019, 13:15 IST
ಜಾನಪದ ಲೋಕದಲ್ಲಿ ಭಾನುವಾರ ಪೂಜಾ ಕುಣಿತ ಪ್ರದರ್ಶನ ಕಾರ್ಯಕ್ರಮ ನಡೆಯಿತು
ಜಾನಪದ ಲೋಕದಲ್ಲಿ ಭಾನುವಾರ ಪೂಜಾ ಕುಣಿತ ಪ್ರದರ್ಶನ ಕಾರ್ಯಕ್ರಮ ನಡೆಯಿತು   

ರಾಮನಗರ: ಜಾನಪದ ಲೋಕದಲ್ಲಿ ಇಲ್ಲಿನ ಕರೇನಹಳ್ಳಿಯ ಲಕ್ಷ್ಮೀದೇವಿ ಜಾನಪದ ಕಲಾ ಸಂಘದ ಪದಾಧಿಕಾರಿಗಳು ಭಾನುವಾರ ಪೂಜಾ ಕುಣಿತ ಪ್ರದರ್ಶಿಸಿದರು.

ತಲೆಮಾರಿನಿಂದ ತಲೆಮಾರಿಗೆ ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಸಾಗಿ ಬಂದಿರುವುದೇ ಜಾನಪದ. ಜನಪದ ಕೇವಲ ಮನೋರಂಜನೆಯಷ್ಟೆ ಅಲ್ಲ. ಅದ್ಭುತವಾದ ಸಂದೇಶವನ್ನು ನೀಡುತ್ತದೆ ಎಂದು ತಮಟೆ ಕಲಾವಿದ ಗೋವಿಂದು ತಿಳಿಸಿದರು.

ಜನ ಸೇರುವುದೆ ಜನಪದ. ಒಬ್ಬರನ್ನೊಬ್ಬರು ಅಗಲುವುದೇ ಆಧುನಿಕತೆ. ಕೂಡುವಿಕೆ, ಸೇರುವಿಕೆ, ಒಂದಾಗುವಿಕೆ, ಏಕತೆ ಜನಪದದ ಮೂಲ ಆಶಯ. ದ್ವೇಷ, ಸಿಟ್ಟು ಮಾಡಿಕೊಳ್ಳುವವರ ಬಳಿ ಕಲೆ ಇರುವುದಿಲ್ಲ. ಹಸಿವನ್ನು ಮೀರಿದ ನಗು ಜನಪದದಲ್ಲಿದೆ. ಜನಪದ ಕಲೆ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಆರೋಗ್ಯವಾಗಿರುತ್ತಾರೆ. ಎಲ್ಲ ಕಾಲಕ್ಕೂ ಜಾನಪದ ಕಲೆಗೆ ಬೆಲೆ ಇದೆ, ಸಾವಿಲ್ಲ ಎಂದು ತಿಳಿಸಿದರು.

ADVERTISEMENT

ಕಲಾವಿದರಾದ ಮಂಜು, ಸಂಜು, ಸಿದ್ದೇಶ್, ಶಿವರಾಜ್, ಶಿವಲಿಂಗಯ್ಯ, ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.