ADVERTISEMENT

ಬಾಣಂತ ಮಾರಮ್ಮ ಅಗ್ನಿಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 2 ಮೇ 2024, 6:13 IST
Last Updated 2 ಮೇ 2024, 6:13 IST
ಕನಕಪುರ ನಗರದ ಬಾಣಂತ ಮಾರಮ್ಮ ಅಗ್ನಿಕೊಂಡಕ್ಕೆ ದೇವರನ್ನು ಮೆರವಣಿಗೆಯಲ್ಲಿ ಕರೆತರುತ್ತಿರುವುದು
ಕನಕಪುರ ನಗರದ ಬಾಣಂತ ಮಾರಮ್ಮ ಅಗ್ನಿಕೊಂಡಕ್ಕೆ ದೇವರನ್ನು ಮೆರವಣಿಗೆಯಲ್ಲಿ ಕರೆತರುತ್ತಿರುವುದು   

ಕನಕಪುರ: ನಗರದಲ್ಲಿ ಬುಧವಾರ ಶಕ್ತಿ ದೇವತೆ ಬಾಣಂತ ಮಾರಮ್ಮ ದೇವಿಯ ಅಗ್ನಿ ಕೊಂಡೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.

ಬಾಣಂತಮಾರಮ್ಮ ದೇವಿಯ ಎಳವಾರ ಕಾರ್ಯಕ್ರಮವು ಮಂಗಳವಾರ ರಾತ್ರಿ ನಡೆದಿದ್ದು ಬುಧವಾರ ಬೆಳಿಗ್ಗೆ  ಅಗ್ನಿಕೊಂಡೋತ್ಸವದ ಅಂಗವಾಗಿ ಅರ್ಕಾವತಿ ನದಿಯಿಂದ ಗಂಗಾಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.

ಮಹಿಳೆಯರು ಶೃಂಗರಿಸಿದ ತಂಬಿಟ್ಟಿನ ಆರತಿಯೊಂದಿಗೆ ಬಾಣಂತಮಾರಮ್ಮ ಮೆರವಣಿಗೆಯಲ್ಲಿ ಸಾಗಿದರು. ದೇವಾಲಯದ ಅರ್ಚಕ ಬೆಳಿಗ್ಗೆ 7 ಗಂಟೆಗೆ ದೇವಿಯ ಕಳಸವನ್ನು ಹೊತ್ತು ಅಗ್ನಿಕೊಂಡವನ್ನು ಯಶಸ್ವಿಯಾಗಿ ಆಯ್ದರು.

ADVERTISEMENT

ಬಾಣಂತ ಮಾರಮ್ಮ ಬಡಾವಣೆ, ವಿವೇಕಾನಂದ ನಗರ, ನೀಲಕಂಠೇಶ್ವರ ಬಡಾವಣೆ, ನಿರ್ವಹಣೆಶ್ವರ ನಗರ, ಭುವನೇಶ್ವರಿ ನಗರ, ಮಹದೇಶ್ವರ ಬಡಾವಣೆ, ಬೃಂದಾವನ ನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಯ ಜನತೆ ಅಗ್ನಿಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.